Select Your Language

Notifications

webdunia
webdunia
webdunia
webdunia

ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಕುಣಿಘಲ್ , ಭಾನುವಾರ, 1 ಮೇ 2016 (12:14 IST)
ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿದ ತಾಯಿಯೋರ್ವಳು ತಾನು ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಕುಣಿಘಲ್ ತಾಲ್ಲೂಕಿನ ಗಾಣಿಮೇಸ್ತ್ರರಪಾಳ್ಯ ಗ್ರಾಮದಲ್ಲಿ ನಡೆದಿದೆ. 
 
ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದು ಬಂದಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಚಂದ್ರಮ್ಮ(26) ಮತ್ತು ಮಕ್ಕಳನ್ನು ಗೌತಮ್ ಮತ್ತು ಧನು ಎಂದು ಗುರುತಿಸಲಾಗಿದೆ. ಮೂವರು ಪ್ರತಿಶತ 50 ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದಾರೆ.
 
ಚಂದ್ರಮ್ಮ ಪತಿ ಮುದ್ದೆಕೋಲಿನಿಂದ ಹೊಡೆದು ಆಕೆಯ ಕಾಲು ಮುರಿದಿದ್ದ. ಇದರಿಂದ ನೊಂದಿದ್ದ ಚಂದ್ರಮ್ಮ ತನ್ನ ಪುಟ್ಟ ಮಕ್ಕಳಿಬ್ಬರಿಗೂ ಸೀಮೆಎಣ್ಣೆ ಸುರಿದು ತಾನು ಕೂಡ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
 
ಗಂಭೀರವಾಗಿ ಗಾಯಗೊಂಡಿರುವ ತಾಯಿ-ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದು ಕುಣಿಘಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

Share this Story:

Follow Webdunia kannada

ಮುಂದಿನ ಸುದ್ದಿ

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಗುಂಡು ಹಾರಿಸಿಕೊಂಡ