ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಗೆ, ಧಾರ್ಮಿಕ ನಾಯಕರೊಬ್ಬರು ಮೇಲೆ ತನಗೆ ಇದ್ದ ದ್ವೇಷ ಮತ್ತು ಆ ಧಾರ್ಮಿಕ ನಾಯಕರಿಗೆ ಶಿಂಜೋ ಅಬೆ ನೆರವಾಗಿದ್ದೆ ಕಾರಣ ಎಂದು ಹಂತಕ ತೆತ್ಸುಯಾ ಯಮಗಾಮಿ ಹೇಳಿಕೆ ನೀಡಿದ್ದಾನೆ ಎಂದು ವರದಿಗಳು ತಿಳಿಸಿ
ವೆ.
ನಮ್ಮ ತಾಯಿ ಧಾರ್ಮಿಕ ಸಂಘಟನೆಯೊಂದರ ಸದಸ್ಯೆಯಾಗಿದ್ದರು. ಆ ಧಾರ್ಮಿಕ ನಾಯಕ ನಮ್ಮ ತಾಯಿಯಿಂದ ದೇಣಿಗೆ ಪಡೆದು ಪಡೆದು ಅವರನ್ನು ದಿವಾಳಿ ಮಾಡಿದ್ದ. ಹೀಗಾಗಿ ಅವರನ್ನು ಹತ್ಯೆ ಮಾಡುವ ಉದ್ದೇಶ ನನಗಿತ್ತು. ಮತ್ತೊಂದೆಡೆ ಈ ಧಾರ್ಮಿಕ ಪಂಗಡ ಜಪಾನ್‌ನಲ್ಲಿ ಹೆಚ್ಚು ಪ್ರಚಾರವಾಗಲು ಅಬೆ ನೆರವಾಗಿದ್ದರು ಎಂಬ ಕಾರಣಕ್ಕಾಗಿ ನಾನು ಅವರನ್ನು ಹತ್ಯೆ ಮಾಡಿದೆ ಎಂದು ವಿಚಾರಣೆ ವೇಳೆ ಯಾಮಗಾಮಿ ತಪ್ಪೊಪ್ಪಿಕೊಂಡಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆ ಧಾರ್ಮಿಕ ನಾಯಕನ ಹೆಸರು ಬಹಿರಂಗವಾಗಿಲ್ಲ.
ಈ ನಡುವೆ ಯಾಮಗಾಮಿ ಅವರ ಮನೆಗೆ ಶನಿವಾರ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸ್ಫೋಟಕ ಪದಾರ್ಥ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.