Webdunia - Bharat's app for daily news and videos

Install App

ಭಾರತೀಯ ಸೇನೆಯಲ್ಲಿ ಖಾಲಿಯಿದೆ 1 ಲಕ್ಷಕ್ಕೂ ಅಧಿಕ ಹುದ್ದೆಗಳು: ಕೇಂದ್ರ ಸರಕಾರ

Webdunia
ಸೋಮವಾರ, 6 ಡಿಸೆಂಬರ್ 2021 (20:27 IST)
ಭಾರತೀಯ ಸೇನೆಯ ಮೂರು ವಿಭಾಗಳಾದ ಭೂ ಸೇನೆ, ವಾಯುಸೇನೆ ಹಾಗೂ ನೌಕಾಪಡೆಯಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.
ಬಿಜೆಪಿ ಸಂಸದ ರಾಖೇಶ್​​ ಸಿನ್ಹಾ ಕೇಳಿರುವ ಪ್ರಶ್ನೆವೊಂದಕ್ಕೆ ಉತ್ತರ ನೀಡಿದ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್​​, ಸೇನೆಯಲ್ಲಿ ಒಟ್ಟು 1,04,653 ಹುದ್ದೆಗಳು ಖಾಲಿ ಇದ್ದು, ಭೂ ಸೇನಾ ವಿಭಾಗದಲ್ಲಿ 97,177 ಜವಾನ್​​ ಹುದ್ದೆಗಳು,7476 ರ್ಯಾಂಕ್​​ ಅಧಿಕಾರಿಗಳ ಪೋಸ್ಟ್​ ಖಾಲಿ ಇವೆ ಎಂದಿದ್ದಾರೆ. ಇದರ ಜೊತೆಗೆ ವಾಯು ಸೇನೆಯಲ್ಲಿ 5,471 ಹುದ್ದೆಗಳು ಖಾಲಿ ಇದ್ದು, 4,850 ರ್ಯಾಂಕ್​​​ ಏರ್​​ಮೆನ್​​ ಹಾಗೂ 621 ರ್ಯಾಂಕ್​​ ಆಫೀಸರ್​​ ಹುದ್ದೆಗಳಾಗಿವೆ ಎಂಬ ಮಾಹಿತಿ ನೀಡಿದ್ದಾರೆ.
ನೌಕಾಪಡೆಯಲ್ಲಿ 12,431 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 11,166 ರ್ಯಾಂಕ್​ ಯೋಧರು ಹಾಗೂ 1265 ರ್ಯಾಂಕ್​​​ ಆಫೀಸರ್​​​ ಹುದ್ದೆಗಳಾಗಿವೆ. ಭಾರತೀಯ ಸೇನೆಯ ಮೂರು ವಿಭಾಗಗಳಲ್ಲೂ ಸಿಬ್ಬಂದಿ ಕೊರತೆ ಇದ್ದು, ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments