Publish Date: Fri, 02 Jun 2017 (14:46 IST)
Updated Date: Fri, 02 Jun 2017 (14:56 IST)
ಬೆಂಗಳೂರು: ಮಳೆ ಯಾವಾಗ ಬರುತ್ತೋ ಎಂದು ಕಾಯುತ್ತಿದ್ದ ಜನತೆಗೆ ತಂಪೆರೆಯುವಂತಹ ಸುದ್ದಿಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಎರಡೇ ದಿನದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಆಗಮನವಾಗಲಿದೆ ಎಂದಿದೆ.
ಕರಾವಳಿಯಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಇನ್ನು ಎರಡು ದಿನಗಳೊಳಗೆ ರಾಜ್ಯದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.
ಈಗಾಗಲೇ ಮುಂಗಾರು ತಡವಾಗಿದ್ದು, ಇನ್ನಾದರೂ ಸಾಕಷ್ಟು ಮಳೆಯಾಗಿ ಬರಗಾಲ ನೀಗಬಹುದು ಎಂಬ ನಿರೀಕ್ಷೆ ಜನರದ್ದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ