ಶಿವಮೊಗ್ಗ:ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗೆ ಸ್ಟ್ರೆಚರ್ ನೀಡದೇ ನೆಲದ ಮೇಲೆ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಮೂವರು ಸಿಬ್ಬಂದಿಗಳನ್ನ ಅಮಾನತು ಮಾಡಿ ಆಸ್ಪತ್ರೆ ಡೀನ್ ಆದೇಶ ಹೊರಡಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ಸ್ಟಾಫ್ ನರ್ಸ್ ಗಳಾದ ಜ್ಯೋತಿ, ಚೈತ್ರ ಹಾಗೂ ಡಿ ಗ್ರೂಪ್ ನೌಕರೆಯಾದ ಸುವರ್ಣಮ್ಮ ಅಮಾನತಾದ ಸಿಬ್ಬಂದಿಗಳು. ಆಸ್ಪತ್ರೆಯ ಡೀನ್ ಸುಶೀಲ್ ಕುಮಾರ್ ಮೂವರು ಸಿಬ್ಬಂದಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಆಸ್ಪತ್ರೆಯ ಅಮಾನವೀಯ ಘಟನೆ ಕುರಿತು ಸಾರ್ವಜನಿಕವಾಗಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ಅನಾರೋಗ್ಯ ಪೀಡಿತ ಪತಿಯನ್ನು ಎಕ್ಸರೇ ಮಾಡಿಸಲು ಎಕ್ಸರೆ ವಿಭಾಗಕ್ಕೆ ಕರೆದೊಯ್ಯಲು ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ಸ್ಟ್ರೆಚರ್ ನೀಡದ ಕಾರಣ ಪತ್ನಿ ಫಾಮಿದಾ ಪತಿ ಅಮೀರ್ ಸಾಬ್ ರನ್ನ ನೆಲದಲ್ಲೇ ಎಳೆದುಕೊಂಡು ಹೋದ ಘಟನೆ ನಡೆದಿತ್ತು.