Publish Date: Fri, 24 Nov 2017 (07:55 IST)
Updated Date: Fri, 24 Nov 2017 (08:20 IST)
ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದ ಕೋತಿಯೊಂದು ಸಿಬ್ಬಂದಿಯನ್ನು ಕೆಲಕಾಲ ಆಟವಾಡಿಸಿದ ಘಟನೆ ನಡೆದಿದ್ದು, ಇದರಿಂದ ಕಚೇರಿಯಲ್ಲಿ ಕೆಲ ಹೊತ್ತು ಆತಂಕ ನಿರ್ಮಾಣವಾಗಿತ್ತು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಕೋತಿಯೊಂದು ನುಗ್ಗಿದ್ದರಿಂದ ಆತಂಕಗೊಂಡ ಸಿಬ್ಬಂದಿ ಕಚೇರಿಯಿಂದ ಹೊರಗೆ ಓಡಿದ್ದಾರೆ. ಇನ್ನು ಕೆಲ ಸಿಬ್ಬಂದಿ ಕೋತಿಯನ್ನು ಹೊರಗೆ ಕಳುಹಿಸಲು ಸಾಹಸ ಮಾಡಿದ್ದಾರೆ.
ಏನೆಲ್ಲಾ ಪ್ರಯತ್ನ ಮಾಡಿದರೂ ಕೋತಿಯನ್ನು ಹೊರಗೆ ಕಳುಹಿಸಲು ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಕೋತಿಯೇ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದೆ. ಹೀಗೆ ಸಿಬ್ಬಂದಿಯನ್ನು ಕೆಲಕಾಲ ಆಟವಾಡಿಸಿದೆ. ಕೋತಿಯ ಆಟದಿಂದ ಸಿಬ್ಬಂದಿ ಕಿರಿಕಿರಿ ಅನುಭವಿಸಿ ಕೊನೆಗೆ ಕೋಲು ಹಿಡಿದು ಹೊರಗೆ ಕಳಿಸಿದ್ದಾರೆ.