ಹಣ ವಾಪಸ್ ಕೇಳಿದ್ದೇ ತಪ್ಪಾಯ್ತ! ಮುಂದೇನಾಯ್ತು?

Webdunia
ಗುರುವಾರ, 3 ಮಾರ್ಚ್ 2022 (12:07 IST)
ಬೆಳಗಾವಿ : ಹಣವನ್ನು ವಾಪಸ್ ನೀಡುವಂತೆ ಕೇಳಿದ ವ್ಯಕ್ತಿಯನ್ನು ಮಹಿಳೆಯೊಬ್ಬಳು ಹತ್ಯೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಬಸೂರ್ತಿ ಗ್ರಾಮದ ಗಜಾನನ ನಾಯಕ(48) ಕೊಲೆಯಾದ ದುರ್ದೈವಿ ಹಾಗೂ ವಿದ್ಯಾಪಾಟೀಲ್ ಆರೋಪಿ. ಗಜಾನನ ಅವರು ಎರಡು ಮದುವೆಯಾಗಿದ್ದರು. ಆದರೆ ಇಬ್ಬರೂ ಪತ್ನಿಯರೂ ಆತನನನ್ನು ಬಿಟ್ಟುಹೊಗಿದ್ದರು. ಆದರೆ ಗಜಾನನ 15 ವರ್ಷದ ಹಿಂದೆಯೇ ಎರಡನೇ ಹೆಂಡತಿಯ ಮಗನನ್ನು ಕರೆದುಕೊಂಡು ಬಂದು ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಬೇಕರಿ ನಡೆಸಿ ಜೀವನ ಸಾಗಿಸುತ್ತಿದ್ದ.

ಹೀಗಿರುವಾಗ ವಿದ್ಯಾ ಪಾಟೀಲ್ ಬೇಕರಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಆನಂತರ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಅವಳಿಗಾಗಿ ಗಜಾನನ ನಾಲ್ಕು ವರ್ಷದ ಹಿಂದೆ ಹಣ ಸೇರಿದಂತೆ ಮನೆಯನ್ನು ಕಟ್ಟಿಸಿಕೊಟ್ಟಿದ್ದ.

ಆದರೆ ಕೊರೊನಾ ಕಾರಣದಿಂದ ಬೇಕರಿ ವ್ಯಾಪಾರದಲ್ಲಿ ನಷ್ಟವಾಗಿ ಬೇಕರಿಯನ್ನು ಮಾರಾಟ ಮಾಡಿ, ರಿಯಲ್ ಎಸ್ಟೇಟ್ನ್ನು ಪ್ರಾರಂಭಿಸಿದ್ದ. ಬೇಕರಿ ಮುಚ್ಚಿದ್ದರಿಂದ ವಿದ್ಯಾ ಗೋವಾಕ್ಕೆ ಹೋಗಿದ್ದಳು. ಇದರಿಂದಾಗಿ ಗಜಾನನ ವಿದ್ಯಾ ಬಳಿ ತಾನು ಕೊಟ್ಟ ಹಣ ಹಾಗೂ ಮನೆಯನ್ನು ವಾಪಸ್ ನೀಡುವಂತೆ ಕೇಳಿದನು. 

ಇದರಿಂದ ಕೋಪಗೊಂಡ ವಿದ್ಯಾ ಗಜಾನನನ್ನು ಕೊಲೆ ಮಾಡಿದ್ದಾಳೆ. ಜೊತೆಗೆ ಆತ ಪ್ರತಿದಿನ ಬರೆದಿಡುತ್ತಿದ್ದ ಡೈರಿ ಹಾಗೂ ಅವನ ಫೋನ್ನೊಂದಿಗೆ ಪರಾರಿಯಾಗಿದ್ದಾಳೆ ಎಂದು ಗಜಾನನ ಮಗ ಅವಧೂತ್ ಆರೋಪ ಮಾಡುತ್ತಿದ್ದಾನೆ. ಸದ್ಯ ಆರೋಪಿ ವಿದ್ಯಾಳ ಪತ್ತೆಗಾಗಿ ಶೋಧ ನಡೆಯುತ್ತಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಮಾಡಿಸಿದ ಆನೆ, ಚಾರ್ಮಾಡಿಯಲ್ಲಿ ನಿಜವಾಗ್ಲೂ ಆಗಿದ್ದೇನು

Karnataka Weather: ಮುಂದಿನ 24 ಗಂಟೆಯ ಹವಾಮಾನ ಬದಲಾವಣೆ ಕೇಳಿದ್ರೆ ಶಾಕ್

ಮನೆ ಕಟ್ಟೋಣ ಎಂದು ವಿಚ್ಛೇಧಿತ ಮಹಿಳೆಗೆ ಕೈಕೊಟ್ಟ ಎರಡನೇ ಗಂಡ, ಆಗಿದ್ದೇನು ಗೊತ್ತಾ

ಕನ್ನಡ, ಕೇರಳ ಭಾಷಾ ವಿವಾದ: ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯೆ

ಪ್ರೀತಿ ತಿರಸ್ಕರಿಸಿದ ಯುವತಿಗೆ ಪಾಗಲ್ ಪ್ರೇಮಿಯ ಕಾಟ, ಕೊನೆಗೂ ವಶಕ್ಕೆ

ಮುಂದಿನ ಸುದ್ದಿ
Show comments