Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ಹುದ್ದೆ: ಮೋಹನ್ ಭಾಗವತ್ ಪರ ಜಾಫರ್‌ ಷರೀಫ್ ಬ್ಯಾಟಿಂಗ್

ಮೋಹನ್ ಭಾಗವತ್
ಬೆಂಗಳೂರು , ಶನಿವಾರ, 1 ಏಪ್ರಿಲ್ 2017 (13:26 IST)
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಬಾಗವತ್ ರಾಷ್ಟ್ರಪತಿಯಾಗಲು ಅರ್ಹರಿದ್ದಾರೆ ಎಂದು ಮಾಜಿ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
 
ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭಾಗವತ್ ರಾಷ್ಟ್ರಪತಿಯಾದ್ರೆ ತಪ್ಪಿಲ್ಲವೆಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
 
ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತವಿರುವುದರಿಂದ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಬಹುದಾಗಿದೆ. ದೇಶಭಕ್ತನೊಬ್ಬನನ್ನು ರಾಷ್ಚ್ರಪತಿ ಮಾಡಿದ್ರೆ ದೇಶದ ಜನತೆಯನ್ನು ಗೌರವಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಮುಂಬರುವ ಜೂನ್ ತಿಂಗಳಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿವೃತ್ತರಾಗಲಿರುವುದರಿಂದ ನೂತನ ರಾಷ್ಟ್ರಪತಿ ಆಯ್ಕೆಗೆ ಚಾಲನೆ ದೊರೆತಿದೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಪುತ್ರ ಯತೀಂದ್ರ ಕಾರು ಸೀಜ್ ಮಾಡಿದ ಚುನಾವಣಾಧಿಕಾರಿಗಳು