Select Your Language

Notifications

webdunia
webdunia
webdunia
Friday, 11 April 2025
webdunia

ವಿದ್ವತ್ ಮೇಲೆ ಹಲ್ಲೆ ನಡೆಸಿದ ಮೊಹಮ್ಮದ್ ನಲಪಾಡ್ ಎಲ್ಲಿದ್ದಾನೆ ಗೊತ್ತೇ?!

ವಿದ್ವತ್ ಹಲ್ಲೆ ಪ್ರಕರಣ
ಬೆಂಗಳೂರು , ಗುರುವಾರ, 5 ಏಪ್ರಿಲ್ 2018 (11:34 IST)
ಬೆಂಗಳೂರು: ಚುನಾವಣೆ ಭರಾಟೆಯಲ್ಲಿ ವಿದ್ವತ್ ಮೇಲಿನ ಹಲ್ಲೆ ಕೇಸ್ ಜನ ಮಾನಸದಿಂದ ಅಳಿಸಿಹೋಗುತ್ತಿದೆ. ಅಷ್ಟಕ್ಕೂ ಆರೋಪಿ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಕತೆ ಈಗ ಏನಾಗಿದೆ ಗೊತ್ತೇ?

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಆತನ ಸಹಚರರಿಗೆ ವಿಧಿಸಿದ್ದ ನ್ಯಾಯಾಂಗ ಬಂಧನ ಅವಧಿ ಏಪ್ರಿಲ್ 17 ರವರೆಗೆ ವಿಸ್ತರಿಸಲಾಗಿದೆ. ನಿನ್ನೆ ಇವರ ನ್ಯಾಯಾಂಗ ಬಂಧನ ಅವಧಿ ಮುಗಿದಿತ್ತು. ವಿಚಾರಣೆ ನಡೆಸಿದ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದೆ.

ಫೆಬ್ರವರಿ 18 ರಂದು ಖಾಸಗಿ ರೆಸ್ಟೋರೆಂಟ್ ನಲ್ಲಿ ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಮತ್ತು ಸ್ನೇಹಿತರು ಕ್ಷುಲ್ಲುಕ ಕಾರಣಕ್ಕೆ ಜಗಳ ತೆಗೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ನಡುವೆ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರೂ ಅದು ತಿರಸ್ಕೃತಗೊಂಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಲಾಪ ನಡೆಯದೇ ಇರುವಾಗ ವೇತನವೂ ಬೇಡ ಎಂದ ಎನ್ ಡಿಎ ಸಂಸದರು!