Select Your Language

Notifications

webdunia
webdunia
webdunia
webdunia

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್ವೈ

webdunia
ಶಿರಾಳಕೊಪ್ಪ , ಸೋಮವಾರ, 27 ಸೆಪ್ಟಂಬರ್ 2021 (08:56 IST)
ಶಿರಾಳಕೊಪ್ಪ : ಒಬ್ಬ ಪುರಸಭೆ ಅಧ್ಯಕ್ಷ ರಾಜೀನಾಮೆ ಕೊಡಲು 10 ಬಾರಿ ಯೋಚಿಸುತ್ತಾನೆ. ಆದರೆ ನಾನು ಯಾವುದೇ ಒತ್ತಡ ವಿಲ್ಲದಿದ್ದರೂ ಪಕ್ಷದಲ್ಲಿ ಇತರರಿಗೂ ಅವಕಾಶ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ರಾಜೀನಾಮೆ ನೀಡಿದ್ದೇನೆ.

ಇದರಿಂದ ಪ್ರಧಾನಿ ಮೋದಿಯೂ ಆಶ್ಚರ್ಯಪಟ್ಟಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಜರಗಿದ ಕಾರ್ಯ ಕ್ರಮವೊಂದರಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ಸ್ಥಾನ ಮಾನವಿಲ್ಲದಿದ್ದರೂ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ರಾಜ್ಯ ಪ್ರವಾಸ ಮಾಡಿ ಪಕ್ಷಕ್ಕೆ 140ಕ್ಕಿಂತ ಹೆಚ್ಚು ಸ್ಥಾನವನ್ನು ಕೊಡಿಸುವ ಉದ್ದೇಶ ಹೊಂದಿದ್ದೇನೆ.
ಕೋವಿಡ್ ಇರುವುದರಿಂದ ಪ್ರವಾಸ ದಲ್ಲಿ ಸಾವಿರಾರು ಜನರು ಸೇರಿ ಅನಾಹುತವಾಗಬಾರದು ಎಂದು ಸುಮ್ಮನಿದ್ದೇನೆ. 15 ದಿನ ಕಳೆದು ರಾಜ್ಯ ಪ್ರವಾಸ ಮಾಡಲಿದ್ದೇನೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಯೋಗಿ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಬಂಪರ್ ಗಿಫ್ಟ್