Publish Date: Sun, 25 Sep 2022 (21:13 IST)
Updated Date: Sun, 25 Sep 2022 (21:18 IST)
ಮನ್ ಕಿ ಬಾತ್ ರೇಡಿಯೊ ಶೋನಲ್ಲಿ ಪ್ರಧಾನಿ ಮೋದಿ, ದೇಶದ ಹಲವು ಮೂಲೆಗಳಿಂದ ಜನರು ಚೀತಾಗಳ ವಾಪಸಾತಿಗೆ ಸಂತೋಷ ವ್ಯಕ್ತಪಡಿಸಿದ್ದಾರೆ. 1.3 ಕೋಟಿ ಭಾರತೀಯರು ಹರ್ಷ ವ್ಯಕ್ತಪಡಿಸಿದ್ದಾರೆ, ಕಾರ್ಯಪಡೆಯು ಚೀತಾಗಳ ಮೇಲೆ ನಿಗಾ ಇಡಲಿದೆ, ಅದರ ಆಧಾರದ ಮೇಲೆ ನೀವು ಯಾವಾಗ ಚೀತಾಗಳನ್ನು ಭೇಟಿ ಮಾಡಬಹುದು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ತಿಳಿಸಿದ್ರು. ಚೀತಾಗಳ ಹೆಸರಿನ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಾನು ವಿನಂತಿಸುತ್ತೇನೆ ಎಂದ್ರು. ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಮೋದಿ ತಿಳಿಸಿದ್ರು.