Select Your Language

Notifications

webdunia
webdunia
webdunia
Thursday, 10 April 2025
webdunia

ಬಿಜೆಪಿಯವರು ದೇಶಪ್ರೇಮಿಗಳು, ಕಾಂಗ್ರೆಸ್‌ನವರು ದೇಶ ವಿರೋಧಿಗಳು: ಮೋದಿ ವಿರುದ್ಧ ಎಚ್. ವಿಶ್ವನಾಥ್ ಆಕ್ರೋಶ

ಬಿಜೆಪಿ
ಬೆಂಗಳೂರು , ಬುಧವಾರ, 28 ಡಿಸೆಂಬರ್ 2016 (18:24 IST)
ಬಿಜೆಪಿ ಪಕ್ಷದವರು ಮಾತ್ರ ದೇಶ ಪ್ರೇಮಿಗಳು. ಕಾಂಗ್ರೆಸ್ ಪಕ್ಷದವರು ರಾಷ್ಟ್ರ ವಿರೋಧಿಗಳು ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಬಿಂಬಿಸುತ್ತಿದ್ದಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. 
 
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್ ಆಗಿ 50 ದಿನ ಕಳೆದರೂ ಸಮಸ್ಯೆಗಳು ಬಗೆಹರಿದಿಲ್ಲ. ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಪ್ರಧಾನಿ ಮೋದಿ ಅವರ ಬೂಟಾಟಿಕೆ ಮಾತುಗಳನ್ನು ನಂಬಿದ ಜನರಿಗೆ ಈಗ ಕಷ್ಟವೇ ಆಗಿದೆ ಎಂದು ದೂರಿದರು. 
 
ಪ್ರಧಾನಿ ಅವರು ಪ್ರತಿದಿನ ಒಂದೊಂದು ಸುಳ್ಳುಗಳನ್ನು ಹೇಳಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಪಕ್ಷದವರು ಮಾತ್ರ ದೇಶ ಪ್ರೇಮಿಗಳು. ಕಾಂಗ್ರೆಸ್ ಪಕ್ಷದವರನ್ನು ರಾಷ್ಟ್ರ ವಿರೋಧಿಗಳು ಎನ್ನವಂತೆ ಪ್ರಧಾನಿ ನರೇಂದ್ರ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. 
 
ದೇಶದಲ್ಲಿ ಯಾರು ಯಾವ ಪಕ್ಷವನ್ನಾದರೂ ಸೇರಬಹುದು ಎಂದು ಮಾಜಿ ಸಂಸದ ಎಚ್.ವಿಶ್ವನಾಥ್, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕುರಿತು ಮಾರ್ಮಿಕವಾಗಿ ನುಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುಪಿ ಚುನಾವಣೆ: ಸಮಾಜವಾದಿ ಪಕ್ಷ ಏಕಾಂಗಿಯಾಗಿ ಕಣಕ್ಕೆ