Webdunia - Bharat's app for daily news and videos

Install App

ಸಿಲಿಕಾನ್‌ ಸಿಟಿಯಲ್ಲಿ ಮೋದಿ ಮೇನಿಯಾ: ಪ್ರಧಾನಿಯನ್ನು ನೋಡಲು ಮಳೆಯನ್ನು ಲೆಕ್ಕಿಸದೆ ಜಮಾಯಿಸಿದ ಜನರು

Sampriya
ಭಾನುವಾರ, 10 ಆಗಸ್ಟ್ 2025 (12:40 IST)
Photo Credit X
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ  ಬೆಂಗಳೂರು - ಬೆಳಗಾವಿ ವಂದೇ ಭಾರತ್ ಸೇರಿದಂತೆ 3 ವಂದೇ ಭಾರತ್ ರೈಲುಗಳಿಗೆ ಗ್ರೀನ್‌ ಸಿಗ್ನಲ್‌ ನೀಡಿದರು.  ಬಳಿಕ ರಾಗಿಗುಡ್ಡ ಮೆಟ್ರೋ ನಿಲ್ದಾಣದತ್ತ ಸಂಚರಿಸಿದರು. 

ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ಸಚಿವ ದಿನೇಶ್ ಗುಂಡೂರಾವ್ ವಂದೇ ಭಾರತ್ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಕ್ಕಳೊಂದಿಗೆ ಪ್ರಧಾನಿ ವಂದೇ ಭಾರತ್ ರೈಲಿನಲ್ಲಿ ಮಾತುಕತೆ ನಡೆಸಿದರು.

ಇದೇ ಸಮಯದಲ್ಲಿ ಅಮೃತ್‍ಸರ್ ದಿಂದ ಶ್ರ ಮಾತಾ ವೈಷ್ಣೋದೇವಿ ಕತ್ರಾ ಹಾಗೂ ನಾಗ್‍ಪುರ್ (ಅಜ್ನಿ) ಯಿಂದ ಪುಣೆಯ ವರೆಗೆ ಚಲಿಸಲಿರುವ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳಿಗೂ ಸಹ ವರ್ಚುವಲ್ ಮೂಲಕ ಚಾಲನೆ ನೀಡಲಾಯಿತು.

ಬೆಂಗಳೂರಿಂದ-ಬೆಳಗಾವಿಗೆ ಕೇವಲ 8.5 ಗಂಟೆಗಳಲ್ಲಿ 611 ಕಿ.ಮೀ ದೂರವನ್ನು ಕ್ರಮಿಸಲಿದೆ. ಹಾಲಿ ಇರುವ ರೈಲಿನ ಸೇವೆಗಳಿಗಿಂತ ಬೆಂಗಳೂರಿನಿಂದ ಬೆಳಗಾವಿಗೆ 1 ಗಂಟೆ 20 ನಿಮಿಷ ಮತ್ತು ಬೆಳಗಾವಿಯಿಂದ ಬೆಂಗಳೂರಿಗೆ ಸುಮಾರು 1 ಗಂಟೆ 40 ನಿಮಿಷ ಸಮಯ ಉಳಿಸಲಿದೆ ಎಂದು ಇಲಾಖೆ ತಿಳಿಸಿದೆ.

ಇದರ ಬೆನ್ನಲ್ಲೇ ಪ್ರಧಾನಿ ಮತ್ತು ಗಣ್ಯರು ರಸ್ತೆ ಮಾರ್ಗವಾಗಿ ಜೆಪಿ ನಗರದ ರಾಗಿಗುಡ್ಡ ಹಳದಿ ಮೆಟ್ರೋ ನಿಲ್ದಾಣದತ್ತ ತೆರಳುತ್ತಿದ್ದಾರೆ. ಅಲ್ಲಿ ಹಳದಿ ಮಾರ್ಗದ ಮೆಟ್ರೊಗೆ ಪ್ರಧಾನಿ ಚಾಲನೆ ನೀಡುವರು. ಈ ದಾರಿಯ ಇಕ್ಕೆಲಗಳಲ್ಲಿ ಮಳೆಯನ್ನೂ ಲೆಕ್ಕಿಸದೆ ಪ್ರಧಾನಿಯನ್ನು ನೋಡಲು ಜನಸಾಗರವೇ ಸೇರಿದೆ. ವಿ.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ರೈಲು ಸಂಚರಿಸಲಿದೆ. ಪ್ರಧಾನಿ ಮತ್ತು ಇತರ ಗಣ್ಯರು ಮೆಟ್ರೋದಲ್ಲಿ ಸಂಚರಿಸಲಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಳದಿ ಮಾರ್ಗಕ್ಕೆ ಕೇಂದ್ರ ನೀಡಿದ್ದು ಕೇವಲ ಶೇ 20ರಷ್ಟು ಅನುದಾನ: ಡಿಸಿಎಂ ಶಿವಕುಮಾರ್‌ ಆಕ್ರೋಶ

ಕರ್ನಾಟಕ ಸ್ವರಾಜ್ಯ ಪಕ್ಷ ಸೇರಿದಂತೆ ದೇಶದ 334 ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಬಿಗ್‌ ಶಾಕ್‌

ರಾಜ್ಯ ರಾಜಧಾನಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ: ಮುಂದಿನ 48 ಗಂಟೆ ಭಾರೀ ಮಳೆಯ ಮುನ್ಸೂಚನೆ

ಪ್ರಧಾನಿ ಮೋದಿಯನ್ನು ಹೂಗುಚ್ಛ ನೀಡಿ ಬರಮಾಡಿಕೊಂಡ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಗೆಹಲೋಟ್

ಬೆಂಗಳೂರು- ಬೆಳಗಾವಿ ವಂದೇ ಭಾರತ್‌ಗೆ ಕೆಲವೇ ಕ್ಷಣಗಳಲ್ಲಿ ಮೋದಿ ಗ್ರೀನ್‌ಸಿಗ್ನಲ್‌: ವೇಳಾಪಟ್ಟಿ ಹೀಗಿದೆ

ಮುಂದಿನ ಸುದ್ದಿ
Show comments