ಹಳದಿ ಮಾರ್ಗಕ್ಕೆ ಕೇಂದ್ರ ನೀಡಿದ್ದು ಕೇವಲ ಶೇ 20ರಷ್ಟು ಅನುದಾನ: ಡಿಸಿಎಂ ಶಿವಕುಮಾರ್‌ ಆಕ್ರೋಶ

Sampriya
ಭಾನುವಾರ, 10 ಆಗಸ್ಟ್ 2025 (11:50 IST)
ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಸೂಕ್ತ ಅನುದಾನ ದೊರೆಯುತ್ತಿಲ್ಲ. ಬೆಂಗಳೂರನ್ನು ಕಡೆಗಣಿಸಲಾಗುತ್ತಿದೆ. ಕರ್ನಾಟಕಕ್ಕೆ ಮತ್ತು ಬೆಂಗಳೂರಿಗೆ ಬಿಜೆಪಿ ಯಾವೊಬ್ಬ ಸಂಸದ ₹ 10 ಅನುದಾನ ಕೊಟ್ಟಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಇಂದು ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆಯ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸಂಸದರಿಗೆ ನಾಚಿಕೆಯಾಬೇಕು. ಒಬ್ಬನೇ ಒಬ್ಬ ಬಿಜೆಪಿ ಎಂಪಿ ₹ 10 ರೂಪಾಯಿ ಅನುದಾನ ಕೊಡಿಸಿಲ್ಲ. ಬಿಜೆಪಿ ಅವರ ಸಾಧನೆ ಏನಿಲ್ಲ ಎಂದು ಲೇವಡಿ ಮಾಡಿದರು.

ಹಳದಿ ಮಾರ್ಗಕ್ಕೆ ರಾಜ್ಯದ್ದೇ ಪಾಲು ಹೆಚ್ಚು. ಶೇ 80 ಅನುದಾನವನ್ನು ನಾವು ಕೊಟ್ಟಿದ್ದೇವೆ. ಬಿಜೆಪಿಯವರು ನಾವೇ ಮೆಟ್ರೋ ಮಾಡಿದ್ದಾರೆ ಎಂದು ಶೋ ಮಾಡುತ್ತಿದ್ದಾರೆ. ನಮ್ಮ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಶೇ 20 ಅನುದಾನ ನೀಡಿದೆ. ನಿಜವಾಗಿ ಅವರು ಶೇ 50 ಅನುದಾನ ನೀಡಬೇಕಿತ್ತು ಸಿಟ್ಟು ಹೊರಹಾಕಿದರು.  

ಕೇಂದ್ರದ ಅನುದಾನ ಸಮರ್ಪಕವಾಗಿ ಬಂದಿಲ್ಲ. ಆದರೂ ಪ್ರಧಾನಿ ಅವರಿಗೆ ಗೌರವ ಕೊಡುತ್ತಿದ್ದೇವೆ. ಬೆಂಗಳೂರನ್ನ ಬೇರೆ ಥರಾ ನೋಡಬೇಡಿ. ಬೆಂಗಳೂರಿಗೆ ನ್ಯಾಷನಲ್ ಕ್ಯಾಪಿಟಲ್ ₹ 1 ಲಕ್ಷ ಕೋಟಿ ಕೊಡಬೇಕು, ಅಹಮದಾಬಾದ್‌ಗೆ ಹೇಗೆ ಪಾಲು ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ನಾನು ರಾಜಕಾರಣ ಮಾಡಲು ಹೋಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ನಮಗೆ ಸೂಕ್ತ ಅನುದಾನವನ್ನು ನೀಡುತ್ತಿಲ್ಲ. ಬೆಂಗಳೂರನ್ನು ನಿರ್ಲಕ್ಷಿಸಲಾಗಿದೆ. ನಗರಕ್ಕೆ ಏನು ಅಗತ್ಯವಿದೆ. ಏನನ್ನೂ ನೀಡಬೇಕು ಎಂಬುದನ್ನು ಪ್ರಧಾನಿಗೆ ಹೇಳುತ್ತೇನೆ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಉಡು‍ಪಿ: ನೌಕಾಪಡೆ ಹಡಗಿನ ಮಾಹಿತಿ ಸೋರಿಕೆ, ಇಬ್ಬರು ಅರೆಸ್ಟ್‌

ಮುಂದಿನ ಸುದ್ದಿ
Show comments