Select Your Language

Notifications

webdunia
webdunia
webdunia
webdunia

ದೇಶದ ಸಾಲ ₹ 200 ಲಕ್ಷ ಕೋಟಿಗೆ ಏರಿಸಿದ್ದೇ ಮೋದಿ ಸರ್ಕಾರದ ಸಾಧನೆ: ರಾಮಲಿಂಗ ರೆಡ್ಡಿ ಕಿಡಿ

ದೇಶದ ಸಾಲ ₹ 200 ಲಕ್ಷ ಕೋಟಿಗೆ ಏರಿಸಿದ್ದೇ ಮೋದಿ ಸರ್ಕಾರದ ಸಾಧನೆ: ರಾಮಲಿಂಗ ರೆಡ್ಡಿ ಕಿಡಿ

Sampriya

ಬೆಂಗಳೂರು , ಶನಿವಾರ, 1 ಫೆಬ್ರವರಿ 2025 (14:38 IST)
Photo Courtesy X
ಬೆಂಗಳೂರು: ಕೇಂದ್ರ ಬಜೆಟ್‌ನಿಂದ ನಮಗೆ ಯಾವುದೇ ಲಾಭ ಇಲ್ಲ. 1947ರಿಂದ ಇಲ್ಲಿತನಕ ₹ 53 ಲಕ್ಷ ಕೋಟಿ ಸಾಲ ಇತ್ತು. ಈಗ 11 ವರ್ಷದಲ್ಲಿ ₹150 ಲಕ್ಷ ಕೋಟಿ ಹೆಚ್ಚುವರಿ ಸಾಲ ಆಗಿದೆ. ದೇಶದ ಸಾಲ ಈಗ ₹ 200 ಲಕ್ಷ ಕೋಟಿ ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕಿಡಿಕಾರಿದರು.

ಕೇಂದ್ರ ಬಜೆಟ್ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ನರೇಂದ್ರ ಮೋದಿ  ಸರ್ಕಾರದಲ್ಲಿ ಗಾಳಿ, ಬೆಳಕು ಎರಡು ಬಿಟ್ಟು ಇನ್ನೆಲ್ಲಾ ಬೆಲೆ ಏರಿಕೆ ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಸರ್ಕಾರ ನಮ್ಮನ್ನು ಸಾಲಗಾರರನ್ನಾಗಿ ಮಾಡಿದೆ. ಇವರಿಂದ ನಾವು ಏನೂ ನಿರೀಕ್ಷೆ ಮಾಡಲಾಗುವುದಿಲ್ಲ. ಸುಮ್ಮನೆ ಮಾಧ್ಯಮಗಳ ಮುಂದೆ ಹೇಳುತ್ತಾರೆ ಅಷ್ಟೇ. ಪ್ರಾಕ್ಟಿಕಲ್ ಆಗಿ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ ಎಂದು ಟೀಕಿಸಿದರು.

 ಮೋದಿ ಅವರ ಆಡಳಿತದಲ್ಲಿ ಯಾವುದಾದರೂ ಬೆಲೆ ಕಡಿಮೆ ಇದೆಯಾ? ಜನರ ಆದಾಯ ಜಾಸ್ತಿ ಆಗಿದ್ಯಾ? ಖರ್ಚು ಮಾತ್ರ ಜಾಸ್ತಿ ಆಗಿದೆ ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸತತ 8ನೇ ಬಾರಿಗೆ ಬಜೆಟ್‌ ಮಂಡಿಸಿ ಹೊಸ ದಾಖಲೆ ಬರೆದ ನಿರ್ಮಲಾ ಸೀತಾರಾಮನ್‌