ಇಂದಿನಿಂದ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್

Webdunia
ಮಂಗಳವಾರ, 27 ಡಿಸೆಂಬರ್ 2022 (15:39 IST)
ವಿದೇಶದಿಂದ ಬಂದಿದ್ದ ನಾಲ್ವರಿಗೆ ಕೊವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ವಿದೇಶದಿಂದ ಬಂದಿದ್ದ 119 ಪ್ರಯಾಣಿಕರಿಗೆ ಟೆಸ್ಟ್​ ಮಾಡಲಾಗಿತ್ತು. 119 ಪ್ರಯಾಣಿಕರ ಪೈಕಿ ನಾಲ್ವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಸದ್ಯ ನಾಲ್ವರು ಸೋಂಕಿತರಿಗೆ ವೈದ್ಯರು ಐಸೋಲೇಷನ್ ಮಾಡಿದ್ದು, ಈ ಮೂಲಕ ವಿದೇಶದಿಂದ ಮರಳಿದ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮತ್ತೆ ಮಹಾಮಾರಿ ಕೊರೋನಾ ಅಲೆ ಬೀಸುತ್ತಿದೆ. ಕಳೆದು ಹೋದ ದಿನಗಳು ಮರುಕಳಿಸುವ ಭೀತಿ ಎದುರಾಗಿದೆ.. ಡಿಸೆಂಬರ್22 ರಂದು 16 ಸೋಂಕಿತರು ಪತ್ತೆಯಾಗಿದ್ದರು.. ಡಿಸೆಂಬರ್23 ರಂದು 10 ಸೋಂಕಿತರು ಪತ್ತೆಯಾಗಿದ್ರೆ, ಡಿಸೆಂಬರ್ 24 ರಂದು 19 ಸೋಂಕಿತರು ಪತ್ತೆಯಾಗಿದ್ದಾರೆ.. ಡಿಸೆಂಬರ್ 25 ರಂದು 22 ಸೋಂಕಿತರು ಪತ್ತೆ ಆಗುವ ಮೂಲಕ ಸೋಂಕಿತರ ಸಂಖ್ಯೆಯಲ್ಲಿ ಸಣ್ಣ ಪ್ರಮಾಣದಲ್ಲಿ‌ ಏರಿಕೆಯಾಗುತ್ತಿದೆ.. ಸದ್ಯ ರಾಜ್ಯದಲ್ಲಿ ಒಮೈಕ್ರಾನ್​ ರೂಪಾಂತರಿ ತಳಿ BF.7 ಭೀತಿ ಹಿನ್ನೆಲೆ ರೂಪಾಂತರಿ ತಳಿ BF.7 ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಇಂದು ಮಾಕ್ ಡ್ರಿಲ್ ನಡೆಸುತ್ತಿದೆ.. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್​ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಸಿ.ವಿ.ರಾಮನ್​ನಗರ ಆಸ್ಪತ್ರೆ, ​ESI ಆಸ್ಪತ್ರೆ ಸೇರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾಕ್​ ಡ್ರಿಲ್​​​​​​​ ನಡೆಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತ್ರಿಪುರಾ: ವಿವಿಧೆಡೆ ₹100 ಕೋಟಿ ಮೌಲ್ಯದ ಗಾಂಜಾ ಗಿಡಗಳು ನಾಶ

ಬಳ್ಳಾರಿ ಘರ್ಷಣೆ, ಬಿಗ್‌ ಅಪ್ಡೇಟ್ ಕೊಟ್ಟ ಜಿ ಪರಮೇಶ್ವರ್‌

ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದ ಆಟೋಡ್ರೈವರ್‌ ಪೊಲೀಸರ ಜತೆ ಹೀಗೇ ನಡೆಸಿಕೊಳ್ಳುವುದಾ

ಇನ್ಮುಂದೆ ವಿಮಾನದಲ್ಲಿ ಪವರ್ ಬ್ಯಾಂಕ್ ಬಳಸುವಂತಿಲ್ಲ, ಕಾರಣ ಗೊತ್ತಾ

ಕೇಂದ್ರದಲ್ಲಿ ಭದ್ರತೆ ಕೇಳಿದ ಜನಾರ್ಧನ ರೆಡ್ಡಿಗೆ ಡಿಸಿಎಂ ಡಿಕೆ ಶಿವಕುಮಾರ್ ಹೀಗೇ ಹೇಳೋದಾ

ಮುಂದಿನ ಸುದ್ದಿ
Show comments