ಮೊಬೈಲ್ ಕಳ್ಳರು ಅಂದರ್

Webdunia
ಶನಿವಾರ, 12 ಮಾರ್ಚ್ 2022 (17:56 IST)
ಮೊಬೈಲ್ ಫೋನ್‍ಗಳನ್ನು ಸಾರ್ವಜನಿಕರಿಂದ ಎಗರಿಸುತ್ತಿದ್ದ ಆರೋಪಿಯೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ಬೆಲೆಬಾಳುವ ನಾಲ್ಕು ಮೊಬೈಲ್ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾ.8ರಂದು ರಾತ್ರಿ 8.45ರ ಸುಮಾರಿನಲ್ಲಿ ಕೆಂಗೇರಿ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಮೊಬೈಲ್ ನೋಡುತ್ತ ನಿಂತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅವರ ಕೈಯಿಂದ ಒನ್ ಪ್ಲಸ್ ಮೊಬೈಲ್‍ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
 
ಈ ಬಗ್ಗೆ ಅವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ಸ್‍ಪೆಕ್ಟರ್ ವಸಂತ್ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಯೊಬ್ಬನನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೊಳ ಪಡಿಸಿದ್ದಾರೆ.
 
ಆರೋಪಿ ನೀಡಿದ ಮಾಹಿತಿ ಮೇರೆಗೆ 4 ಲಕ್ಷ ರೂ. ಬೆಲೆಬಾಳುವ ಕೆಂಗೇರಿ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮೊಬೈಲ್ ಫೋನ್‍ಗಳು ಮತ್ತು ಜ್ಞಾನಭಾರತಿ ಹಾಗೂ ಗಿರಿನಗರ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಕೆಂಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳನ್ನು ಟೀಕಿಸುವ ರಾಹುಲ್ ಗಾಂಧಿಗೆ ರಾಮಮಂದಿರಕ್ಕೆ ಪ್ರವೇಶ ಕೊಡಬಾರದು: ಎದುರಾಯ್ತು ಭಾರೀ ವಿರೋಧ

ಕಾರು ಇದೆ ಅಂತ ಈ ಥರಾ ಸ್ಟಂಟ್ ಮಾಡಿದ್ರೆ ದಂಡ ಬೀಳುತ್ತೆ: ಎಚ್ಚರಿಕೆ ಕೊಟ್ಟ ಸಂಚಾರಿ ಪೊಲೀಸರು video

Karnataka Weather: ಇಂದು ರಾಜ್ಯದಲ್ಲಿ ಮಳೆಯಿರುತ್ತಾ, ಹವಾಮಾನ ಬದಲಾವಣೆ ಗಮನಿಸಿ

ಸಂಬಂಧಿ ಮೇಲೆ ನಿರಂತರ ರೇಪ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಾಮುಕ

ಬಿಗ್‌ಬಾಸ್ ಸೀಸನ್ 12, ಕ್ಷಮೆಯೊಂದಿಗೆ ಮುನಿಸಿಗೆ ಅಂತ್ಯ ಹಾಡಿದ ಗಿಲ್ಲಿ, ಅಶ್ವಿನಿ ಗೌಡ

ಮುಂದಿನ ಸುದ್ದಿ
Show comments