Publish Date: Sat, 06 Jan 2018 (19:47 IST)
Updated Date: Sat, 06 Jan 2018 (19:49 IST)
ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ವರದಿಯಾಗಿದೆ.
ಮಾಗಡಿಯ ಪುರಸಭೆ ಕಚೇರಿಯ ಎದುರು ಈ ಘಟನೆ ನಡೆದಿದ್ದು, ಪುರಸಭೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿ ಕೈಕೊಟ್ಟಿದ್ದರಿಂದ ಅಸಮಾಧಾನಗೊಂಡವರು ಚಪ್ಪಲಿ ಎಸೆದಿದ್ದಾರೆ.
ದಲಿತ ಸಮುದಾಯದ ರಂಗ ಹನುಮಯ್ಯ ಅವರ ಪತ್ನಿಗೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿದ್ದ ಶಾಸಕರು, ಇಂದು ನಡೆದ ಚುನಾವಣೆಯಲ್ಲಿ ಬೇರೆಯವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದರಿಂದ ಕಾರಿನಲ್ಲಿ ಹೊರಡುವಾಗ ಚಪ್ಪಲಿ ಎಸೆಯಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.