Publish Date: Tue, 05 Sep 2023 (18:28 IST)
Updated Date: Tue, 05 Sep 2023 (19:31 IST)
ಜಾರಕಿಹೊಳಿ ಕಳೆದುಹೋಗಿರುವ ತಮ್ಮ ವರ್ಚಸನ್ನು ವಾಪಸ್ಸು ಪಡೆಯುವ ಪ್ರಯತ್ನದಲ್ಲಿ ತೊಡಗಿದ್ದರೆ, ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಇಲಾಖೆಯ ಕೆಲಸಗಳಲ್ಲಿ ಮಗ್ನರಾಗಿದ್ದಾರೆ ಮತ್ತು ಸವದಿ ಕೃಷಿ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ತೆರಳಿದ್ದಾರೆ.ಸವದಿ ಅಮೇರಿಕಾದಲ್ಲಿರುವ ಫೋಟೋಗಳನ್ನು ಹಂಚಿಕೊಂಡ್ರೆ ಇತ್ತ, ಜಾರಕಿಹೊಳಿ ಅಥಣಿಯಲ್ಲಿ ಓಡಾಡುತ್ತಾ ಜನರೊಂದಿಗೆ ಬೆರೆಯುತ್ತಿದ್ದಾರೆ, ಖಾಸಗಿ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಸದ್ಯ ಇದನ್ನೆಲ್ಲ ಗಮನಿಸಿದ್ರೆ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಭಾರಿ ಪ್ರಯತ್ನವನ್ನ ಮಾಡ್ತಿದ್ದಾರೆ.