ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿ ಒಮ್ಮೆ ವಿವಾದಕ್ಕೆ ಸಿಲುಕಿದ್ದ ಶಾಸಕ ಇಕ್ಬಾಲ್ ಹುಸೇನ್ ಮತ್ತೆ ಅವರ ಪರ ಬ್ಯಾಟ್ ಬೀಸಿದ್ದಾರೆ. ಈ ಬಾರಿ ಏನು ಕಾದಿದ್ಯೋ ನೋಡಬೇಕಿದೆ.
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು. ಅವರಿಗೆ ನಮ್ಮ ಬೆಂಬಲವಿದೆ ಎಂದು ಈ ಹಿಂದೆ ಹೇಳಿ ಶಾಸಕ ಇಕ್ಬಾಲ್ ಹುಸೇನ್ ರಾಜ್ಯ ಕಾಂಗ್ರೆಸ್ ನಲ್ಲಿ ಕೋಲಾಹಲ ಸೃಷ್ಟಿಸಿದ್ದರು. ಇದಾದ ಬಳಿಕ ಸ್ವತಃ ಡಿಕೆ ಶಿವಕುಮಾರ್ ಅವರೇ ಎಚ್ಚರಿಕೆ ನೀಡಿದ್ದರು. ಈ ರೀತಿ ಬಹಿರಂಗ ಹೇಳಿಕೆ ನೀಡಬಾರದು ಎಂದಿದ್ದರು.
ಇದಾದ ಬಳಿಕ ಕೆಲವು ದಿನ ತಣ್ಣಗಾಗಿದ್ದ ಇಕ್ಬಾಲ್ ಹುಸೇನ್ ಈಗ ಮತ್ತೆ ಬಾಯ್ಬಿಟ್ಟಿದ್ದಾರೆ. ಅಂದಿನ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ. ಡಿಕೆ ಶಿವಕುಮಾರ್ ನಮ್ಮ ನಾಯಕರು. ಅವರ ಹೋರಾಟಗಳಿಗೆ ಬೆಲೆ ಸಿಗಬೇಕು ಎಂದಿದ್ದಾರೆ.
ಡಿಕೆ ಶಿವಕುಮಾರ್ ಗೆ ಒಳ್ಳೆಯ ಸ್ಥಾನ ಮಾನ ಸಿಗಲಿ ಎಂದು ಕೇಳುವ ಹಕ್ಕು ನನಗಿಲ್ವಾ? ನಾನೂ ಅವರೂ ಒಂದೇ ಜಿಲ್ಲೆಯವರು.ಅವರ ಹೋರಾಟಗಳಿಗೆ ಬೆಲೆ ಇಲ್ವಾ ಎಂದು ಕೇಳಿದ್ದಾರೆ. ಈ ಮೂಲಕ ಇಕ್ಬಾಲ್ ಹುಸೇನ್ ಒಮ್ಮೆ ತಣ್ಣಗಾಗಿದ್ದ ಸಿಎಂ ಬದಲಾವಣೆ ಚರ್ಚೆಯನ್ನು ಮತ್ತೆ ಬಡಿದೆಬ್ಬಿಸಿದ್ದಾರೆ. ಈಗ ಇನ್ನೇನು ಕಾದಿದ್ಯೋ ಎಂದು ಜನ ನೋಡುವಂತಾಗಿದೆ.