Publish Date: Mon, 19 Feb 2018 (09:52 IST)
Updated Date: Mon, 19 Feb 2018 (09:56 IST)
ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ ಪುತ್ರ ಮೊಹಮ್ಮದ್ ನಲಪಾಡ್ ಶೀಘ್ರದಲ್ಲೇ ಪೊಲೀಸರಿಗೆ ಶರಣಾಗುತ್ತಾನೆ ಎಂದು ಕಾಂಗ್ರೆಸ್ ಶಾಸಕ ಹ್ಯಾರಿಸ್ ಹೇಳಿದ್ದಾರೆ.
‘ರಾತ್ರಿ ತಾಯಿ ಜತೆ ಮಲಪಾಡ್ ಮಾತನಾಡಿದ್ದಾನೆ. ಆಗ ಠಾಣೆಗೆ ತೆರಳಿ ಶರಣಾಗಲು ಹೇಳಿದ್ದೇನೆ. ಶರಣಾಗುತ್ತಾನೆ. ಅದರಲ್ಲಿ ಅನುಮಾನ ಬೇಡ. ಈ ವಿಚಾರವನ್ನು ರಾಜಕೀಯ ಮಾಡುವುದು ಬೇಡ’ ಎಂದು ಹ್ಯಾರಿಸ್ ಹೇಳಿದ್ದಾರೆ.
ಮೊಹಮ್ಮದ್ ಇಂದು ಶರಣಾಗುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಅದರಂತೆ ಇಂದು ಠಾಣೆಗೆ ತೆರಳಿ ಶರಣಾಗಿಸುತ್ತೇನೆ ಎಂದು ಶಾಸಕರೂ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ