Daily Horoscope
✕

ಶಾಸಕ ಆನಂದ್ ಸಿಂಗ್ ಗೆ ಇನ್ನು ಮನೆಯಲ್ಲಿ ವಿಶ್ರಾಂತಿ!

Webdunia
ಮಂಗಳವಾರ, 5 ಫೆಬ್ರವರಿ 2019 (14:07 IST)
ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಕಳೆದ ರಾತ್ರಿ ಆಸ್ಪತ್ರೆಯಿಂದ ತರಾತುರಿಯಲ್ಲಿ ಡಿಸ್ಚಾರ್ಜ್ ಆಗಿದ್ದಾರೆಂದು ಹೇಳಲಾಗುತ್ತಿದೆ.

ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದ ವೇಳೆ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಶಾಸಕ ಆನಂದ್ ಸಿಂಗ್  ಚಿಕಿತ್ಸೆಗೆ ದಾಖಲಾಗಿದ್ದರು.  ಆನಂದ್ ಸಿಂಗ್ ಅವರಿಗೆ ಇನ್ನೂ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದು, ಹೀಗಾಗಿ ಮನೆಯಲ್ಲೇ ಆನಂದ್ ಸಿಂಗ್ ವಿಶ್ರಾಂತಿ ಪಡೆಯಲಿದ್ದಾರೆ. ಈ ಮಧ್ಯೆ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಜೆ.ಎನ್. ಗಣೇಶ್, ಆನಂದ್ ಸಿಂಗ್ ಅವರೊಂದಿಗೆ ಆಪ್ತರ ಮೂಲಕ ರಾಜಿ ಸಂಧಾನ ನಡೆಸಲು ಮುಂದಾಗಿದ್ದಾರೆಂದು ಹೇಳಲಾಗಿದೆ.

ಆದರೆ ಆನಂದ್ ಸಿಂಗ್ ಮತ್ತು ಅವರ ಕುಟುಂಬಸ್ಥರು ರಾಜಿ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿರುವ ಕಾರಣ ಗಣೇಶ್ ಅವರ ಅಜ್ಞಾತವಾಸ ಇನ್ನೂ ಕೆಲವು ಕಾಲ ಮುಂದುವರೆಯಲಿದೆ. ಫೆಬ್ರವರಿ 6 ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನಕ್ಕೂ ಗಣೇಶ್ ಹಾಜರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಆನಂದ್ ಸಿಂಗ್ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತ ಗಣೇಶ್ ಬಂಧನಕ್ಕೆ ಪೊಲೀಸರು ಯತ್ನ ಮುಂದುವರಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಂಡ್ತಿ ಪ್ರೆಗ್ನೆಂಟ್ ನಿಧಾನಕ್ಕೆ ಬಸ್ ಓಡಿಸಪ್ಪಾ ಎಂದಿದ್ದೇ ತಪ್ಪಾಯ್ತು: ಸರ್ಕಾರಿ ಬಸ್ ಚಾಲಕನ ವರ್ತನೆ ನಿಜಕ್ಕೂ ಶಾಕಿಂಗ್ Video

ಉದ್ಯಮಿಗಳು, ತೆರಿಗೆದಾರರನ್ನು ತೆಗಳಿದರೆ ದೇಶ ಸಾಗಲ್ಲ: ಪ್ರಧಾನಿ ಮೋದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಡು ರಸ್ತೆಯಲ್ಲಿ ಒಬ್ಬಾತ ಕೊಚ್ಚಿ ಕೊಲೆ ಮಾಡುತ್ತಿದ್ದರೆ ಸಿನಿಮಾದಂತೆ ನೋಡುತ್ತಿದ್ದ ಜನ: ಭೀಕರ Video ವೈರಲ್

ಯುಪಿಎ ಅವಧಿಯಲ್ಲಿ ಮೋದಿ ಜೈಲಿಗೆ ಹೋಗಬೇಕಿತ್ತು, ಕಾಂಗ್ರೆಸ್ ನವರೇ ತಡೆದರು, ಅದಕ್ಕೇ ಈಗ ಅನುಭವಿಸ್ತಿದ್ದೀವಿ: ವೀರಪ್ಪ ಮೊಯಿಲಿ Video

ಮುಂದಿನ ಸುದ್ದಿ
Show comments