Select Your Language

Notifications

webdunia
webdunia
webdunia
webdunia

ಮನೆ ಬಿಟ್ಟು ಹೋಗಿದ್ದ ಬೆಂಗಳೂರಿನ ಬಾಲೆ ಹುಬ್ಬಳ್ಳಿಯಲ್ಲಿ ಪತ್ತೆ!

ಮನೆ ಬಿಟ್ಟು ಹೋಗಿದ್ದ ಬೆಂಗಳೂರಿನ ಬಾಲೆ ಹುಬ್ಬಳ್ಳಿಯಲ್ಲಿ ಪತ್ತೆ!
ಹುಬ್ಬಳ್ಳಿ , ಭಾನುವಾರ, 28 ಆಗಸ್ಟ್ 2016 (17:49 IST)
ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಕ್ಕೆ ತಾಯಿ ನಿಂದಿಸಿದ್ದಾರೆಂಬ ಕಾರಣಕ್ಕಾಗಿ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಬೆಂಗಳೂರಿನ ಶ್ರೀರಾಂಪುರದ ನಿವಾಸಿ ಪೂಜಿತಾ ಇಂದು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ.
 
ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಎಂಟನೇಯ ತರಗತಿಯಲ್ಲಿ ವಿದ್ಯಾರ್ಥಿನಿ ಪೂಜಿತಾ ಅಗಸ್ಟ್ 24ರಂದು ಶಾಲೆಗೆ ತೆರಳಿದ್ದು, ಬಳಿಕೆ ಮನೆಗೆ ಪಾವಸ್ಸಾಗಿರಲಿಲ್ಲ. ಇದರಿಂದ ಆತಂಗಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಗಳು ನಾಪತ್ತೆಯಾಗಿರುವ ಕುರಿತು ಸುದ್ದಿ ಹರಿಬಿಟ್ಟಿದ್ದರು. ಇದರಿಂದ ರಾಜ್ಯಾದ್ಯಂತ ಬಾಲಕಿಯ ಹುಡುಕಾಟ ನಡೆದಿದ್ದು, ಇಂದು ಹುಬ್ಬಳ್ಳಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.
 
ಸಿಸಿಟಿವಿ ದೃಶ್ಯ ಆಧರಿಸಿ ಬಾಲಕಿಯ ಪತ್ತೆಗೆ ಮುಂದಾಗಿದ್ದ ಪೊಲೀಸರಿಗೆ ಪೂಜಿತಾ ಸಂಬಂಧಿಕರ ಮನೆಯಲ್ಲಿರುವುದು ತಿಳಿದು ಬಂದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪನವರನ್ನು ಬಳಸಿಕೊಂಡು ಯಡಿಯೂರಪ್ಪರನ್ನು ಮುಗಿಸಲು ಸಂಚು: ಬಸವನಗೌಡ ಪಾಟೀಲ್ ಯತ್ನಾಳ್