Select Your Language

Notifications

webdunia
webdunia
webdunia
webdunia

ಈಶ್ವರಪ್ಪನವರನ್ನು ಬಳಸಿಕೊಂಡು ಯಡಿಯೂರಪ್ಪರನ್ನು ಮುಗಿಸಲು ಸಂಚು: ಬಸವನಗೌಡ ಪಾಟೀಲ್ ಯತ್ನಾಳ್

ಈಶ್ವರಪ್ಪನವರನ್ನು ಬಳಸಿಕೊಂಡು ಯಡಿಯೂರಪ್ಪರನ್ನು ಮುಗಿಸಲು ಸಂಚು: ಬಸವನಗೌಡ ಪಾಟೀಲ್ ಯತ್ನಾಳ್
ಬಾಗಲಕೋಟೆ , ಭಾನುವಾರ, 28 ಆಗಸ್ಟ್ 2016 (17:31 IST)
ವಿಧಾನ ಪರಿಷತ್ ಪ್ರತಿಪಕ್ಷ ಕೆ.ಎಸ್.ಈಶ್ವರಪ್ಪನವರನ್ನು ಬಳಸಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರನ್ನು ರಾಜಕೀಯದಿಂದ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂಜು ಪರಿಷತ್ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
 
ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪನವರು ಸದ್ಯ ಹರಕೆಯ ಕುರಿಯಾಗಿದ್ದಾರೆ. ಕೇಂದ್ರ ಸಚಿವರಾದ ಸದಾನಂದ ಗೌಡ, ರಮೇಶ್ ಜಿಗಜಿಣಗಿ ಸೇರಿದಂತೆ ವಿಧಾನಸಭಾ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅವರು ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಸಿದ್ದಾರೆ ಎಂದರು.
 
ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಯಾರ ಮನೆ ಬಾಗಿಲು ತಟ್ಟಲ್ಲ. ನನ್ನದು ಕಾಲಿಗೆ ಬೀಳುವ ಸಂಸ್ಕೃತಿಯಲ್ಲ. ಗೌರವಯುತವಾಗಿ ಕರೆದರೆ ಬಿಜೆಪಿ ಪಕ್ಷಕೆ ಸೇರಲು ಸಿದ್ಧ ಎಂದು ಹೇಳಿದರು.
 
ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಪಾಕಿಸ್ತಾನ ಪರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೇಶ ವಿರೋಧಿ ಹೇಳಿಕೆ ನೀಡಿರುವ ರಮ್ಯಾಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪರಿಷತ್ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾಯ್ದು ನೋಡಿ, ರಾಜ್ಯಕ್ಕೆ ಮತ್ತಷ್ಟು ಸಿಹಿ ಸುದ್ದಿ ನೀಡುತ್ತೇನೆ: ಪ್ರಕಾಶ್ ಜಾವ್ಡೇಕರ್