Select Your Language

Notifications

webdunia
webdunia
webdunia
webdunia

ಸೋದರಮಾವನಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ಈಗ ಗರ್ಭಿಣಿ

ಸೋದರಮಾವನಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ಈಗ ಗರ್ಭಿಣಿ
ಯಾದಗಿರಿ , ಬುಧವಾರ, 22 ಜೂನ್ 2022 (10:07 IST)
ಯಾದಗಿರಿ: ಸೋದರ ಮಾವನಿಂದ ಅತ್ಯಾಚಾರಕ್ಕೊಳಗಾಗಿದ್ದ 8 ನೇ ತರಗತಿ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

7 ತಿಂಗಳ ಹಿಂದೆ ಅಜ್ಜಿಮನೆಗೆ ತಾಯಿಯೊಂದಿಗೆ ಹೋಗಿದ್ದಾಗ ಸೋದರ ಮಾವ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಆದರೆ ಈ ವಿಚಾರವನ್ನು ಬಾಲಕಿ ಯಾರ ಬಳಿಯೂ ಬಾಯ್ಬಿಟ್ಟಿರಲಿಲ್ಲ. ಆದರೆ ಈಗ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ವಿಚಾರ ತಿಳಿಯುತ್ತಿದ್ದಂತೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ದೇಹವನ್ನೇ ತಿಂದ ಸಾಕು ಬೆಕ್ಕುಗಳು!?