ಚಾಕಲೇಟು ಕೊಡಿಸುವುದಾಗಿ ಅಮಿಷ ಒಡ್ಡಿ ಕರೆದೊಯ್ದು, 5 ವರ್ಷದ ಪುಟ್ಟ ಮಗುವಿನ ಮೇಲೆ 20 ವರ್ಷದ ಯುವಕನೋರ್ವ ಅತ್ಯಾಚಾರಗೈದ ಹೇಯ ಕೃತ್ಯ ಕೊಟ್ಟೂರಿನಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ಬಿ.ಆರ್. ಗಣೇಶ್ ಎಂದು ಗುರುತಿಸಲಾಗಿದ್ದು ಆತನೀಗ ಪೊಲೀಸರ ವಶದಲ್ಲಿದ್ದಾನೆ.
ಘಟನೆ ವಿವರ: ಆರೋಪಿ ಗಣೇಶ್ ದಾವಣಗೆರೆಯ ಮಾಗನಹಳ್ಳಿಯವನಾಗಿದ್ದು ಕೂಲಿ ಕೆಲಸ ಮಾಡಿಕೊಂಡು ತಮ್ಮ ಸಂಬಂಧಿ ದಾಕ್ಷಾಯಣಮ್ಮ ಎಂಬುವವರ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ವಾಸವಾಗಿದ್ದ.
ಭಾನುವಾರ ಸಂಜೆ 6 ಗಂಟೆಯ ಸುಮಾರಿಗೆ ಮನೆಯ ಮುಂದೆ ಆಟವಾಡಿಕೊಂಡಿದ್ದ ನೆರೆಮನೆಯ ಬಾಲಕಿಯನ್ನು ಚಾಕಲೇಟು ಕೊಡಿಸುವ ನೆಪದಿಂದ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಆರೋಪಿ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.