Select Your Language

Notifications

webdunia
webdunia
webdunia
webdunia

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲೆ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ

13-year-old girl
ಅಲಿಪರ್ದೂರ್ , ಮಂಗಳವಾರ, 14 ಫೆಬ್ರವರಿ 2017 (07:45 IST)
ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ 13 ವರ್ಷದ ಬಾಲಕಿಯನ್ನು ಹತ್ಯೆಗೈದ 17 ವರ್ಷದ ಬಾಲಕ ಬಳಿಕ ತಾನು ಕೂಡ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹೇಯ ಘಟನೆ ಪಶ್ಚಿಮ ಬಂಗಾಳದ ಅಲಿಪರ್ದೂರ್ ಜಿಲ್ಲೆಯ ಚಕ್ಚಕ ಗ್ರಾಮದಲ್ಲಿ ನಡೆದಿದೆ. 
ಜೀವನ್ಮರಣದ ನಡುವೆ ಹೋರಾಡುತ್ತಿರುವ ಆರೋಪಿಯನ್ನು ಶ್ಯಾಮ್ ಲಾಲ್ ಚೌಧರಿ ಎಂದು ಗುರುತಿಸಲಾಗಿದ್ದು ಕೂಲಿ ಕಾರ್ಮಿಕನಾಗಿರುವ ಈತ ನೆರೆಮನೆಯ ಬಾಲಕಿಯನ್ನು ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ ಆಕೆ ಆತನ ಪ್ರೇಮ ನಿವೇದನೆಯನ್ನು ತಳ್ಳಿ ಹಾಕುತ್ತಲೇ ಬಂದಿದ್ದಳು. ಇದರಿಂದ ಸಿಟ್ಟಿಗೆದ್ದ ಯುವಕ ಭಾನುವಾರ ಆಕೆಯ ಕತ್ತು ಕತ್ತರಿಸಿ ಕೊಲೆಗೈದಿದ್ದಾನೆ. ಬಳಿಕ ತಾನು ಕೂಡ ವಿ| ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 
 
ಬಾಲಕಿಯ ಶವ ಆಕೆಯ ಮನೆಯ ಹತ್ತಿರದ ನದಿಯೊಂದರ ದಡದಲ್ಲಿ ಪತ್ತೆಯಾಗಿದೆ.
 
ಗಂಭೀರ ಸ್ಥಿತಿಯಲ್ಲಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯಾ ಬಾಂಬ್ ದಾಳಿಗೆ ಪೊಲೀಸ್ ಅಧಿಕಾರಿಗಳು ಸೇರಿದಂತೆ 16 ಬಲಿ