Publish Date: Tue, 14 Aug 2018 (19:35 IST)
Updated Date: Tue, 14 Aug 2018 (19:37 IST)
ಹಾವೇರಿ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಹಾವೇರಿಯ ಹುಕ್ಕೇರಿ ಮಠಕ್ಕೆ ಭೇಟಿ ನೀಡಿದರು. ಆ ಮೂಲಕ ಕೆಲಸ ಪ್ರಾರಂಭಿಸಿದ್ರು.
ಮಹಾದಾಯಿ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಮಾತನಾಡಿದ ಜಮೀರ್ ಅಹಮದ್, ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಇದು ಸ್ವಾಗತಾರ್ಹ, ನ್ಯಾಯಾಲಯದಿಂದ ಜಯ ಸಿಕ್ಕಿದ್ದು ಖುಷಿಯಾಗಿದೆ.
ಬಿಜೆಪಿಯವರು ಪ್ರಯತ್ನ ಮಾಡಿದ್ದರೆ ಯಾವಗಲೋ ಮಹಾದಾಯಿ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು. ಆದರೆ ನ್ಯಾಯಾಲಯ ಸಮಸ್ಯೆ ಬಗೆಹರಿಸಿದೆ. ಇದು ತುಂಬಾ ಖುಷಿಯ ಸಂಗತಿ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ರು.