Select Your Language

Notifications

webdunia
webdunia
webdunia
webdunia

‘ಕೈ’ ಹಿಡಿತಾರಾ ಸಚಿವ ಸೋಮಣ್ಣ?

‘ಕೈ’ ಹಿಡಿತಾರಾ ಸಚಿವ ಸೋಮಣ್ಣ?
bangalore , ಮಂಗಳವಾರ, 14 ಮಾರ್ಚ್ 2023 (14:07 IST)
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸಿದ್ದು, ರಾಜಕೀಯ ಮೇಲಾಟಗಳು ಗರಿಗೆದರಿವೆ.. ಪಕ್ಷಾಂತರ ಪರ್ವ ಜೋರಾಗೇ ನಡೀತಿದ್ದು, ಪ್ರಭಾವಿಗಳಿಗೆ ಎಲ್ಲಾ ಪಕ್ಷಗಳು ಗಾಳ ಹಾಕ್ತಿವೆ.. ಪಕ್ಷದಲ್ಲಿ ಸೈಲೆಂಟ್​​ ಆಗಿ ಬಂಡಾಯವೆದ್ದ ನಾಯಕರನ್ನು ಸೆಳೆಯಲು ಎಲ್ಲಾ ಪಕ್ಷಗಳು ಬಕಪಕ್ಷಿಗಳಂತೆ ಕಾಯ್ತಿರ್ತವೆ.. ಇದೀಗ ಸಚಿವ V.ಸೋಮಣ್ಣ ಕೇಸರಿ ಪಡೆ ವಿರುದ್ಧ ಮುನಿಸಿಕೊಂಡಿದ್ದಾರೆ.. ಸೋಮಣ್ಣ ಕಮಲ ತೊರೆದು BJP ಸೇರ್ತಾರ ಎಂಬ ಪ್ರಶ್ನೆ ಮೂಡಿದ್ದು, ಸೋಮಣ್ಣರ ನಡೆ ಮತ್ತಷ್ಟು ನಿಗೂಢವಾಗಿದೆ..ಬಂಡಾಯ ನಾಯಕ ಸೋಮಣ್ಣ ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.. ಇದಕ್ಕೆ ಪುಷ್ಟಿ ನೀಡುವಂತೆ KPCC ಅಧ್ಯಕ್ಷ D.K. ಶಿವಕುಮಾರ್​ ಹಾಗೂ ಸೋಮಣ್ನ ಜೊತೆಗಿರುವ ಫೋಟೋ ವೈರಲ್​ ಆಗಿದೆ.. ಸೋಮಣ್ಣ, ಡಿ.ಕೆ.ಶಿವಕುಮಾರ್‌ ಮಾತುಕತೆಯ ಫೋಟೋ ಪವರ್ ಟಿವಿಗೆ ಲಭ್ಯವಾಗಿದ್ದು, ಡಿಕೆಶಿ ಹಾಗೂ ಸೋಮಣ್ಣ ಒಂದೇ ಫ್ಲೈಟ್‌ನಲ್ಲಿ ಒಟ್ಟಿಗೆ ಕೂತು ಪ್ರಯಾಣ ಬೆಳೆಸುತ್ತಿರುವ ಫೋಟೋ ಲಭ್ಯವಾಗಿದೆ. ಸೋಮಣ್ಣ ಪುತ್ರನಿಗೆ ಬಿಜೆಪಿಯಿಂದ ಟಿಕೆಟ್‌ ಕೊಡಿಸಲು ಪ್ಲ್ಯಾನ್‌ ನಡೆಯುತ್ತಿದೆ ಎನ್ನಲಾಗಿದ್ದು, ಇತ್ತ KPCC ಅಧ್ಯಕ್ಷರು ಮಾತ್ರ ಸೋಮಣ್ಣರನ್ನ ಪಕ್ಷಕ್ಕೆ ಕರೆತರುವ ಸರ್ಕಸ್ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂ-ಮೈ ಹೈವೇ ಟೋಲ್​ ಸಂಗ್ರಹ ಆರಂಭ