Publish Date: Tue, 14 Mar 2023 (11:09 IST)
Updated Date: Tue, 14 Mar 2023 (11:12 IST)
ಬೆಂಗಳೂರು : ಪೀಕ್ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಸಂಚಾರ ಪೊಲೀಸರು ನಿರ್ಬಂಧ ಹೇರಿದ್ದನ್ನು ಖಂಡಿಸಿ ಸರಕು ಸಾಗಣೆ ವಾಹನಗಳ ಮಾಲೀಕರು ಮಾರ್ಚ್ 17ರಂದು ಬಂದ್ ಕರೆ ಕೊಟ್ಟಿದ್ದಾರೆ.
ಪೀಕ್ ಅವರ್ನಲ್ಲಿ ಬೆಂಗಳೂರು ನಗರದೊಳಗೆ ಸರಕು ವಾಹನಕ್ಕೆ ಪ್ರವೇಶ ನಿರ್ಬಂಧಿಸಿದ ಹಿನ್ನಲೆ ಪ್ರತಿಭಟನೆ ನಡೆಸಲಾಗಿತ್ತು. ಈ ಕುರಿತು ಟ್ರಾಫಿಕ್ ಕಮೀಷನರ್ ಸಲೀಂ ಜೊತೆ ವಾಹನ ಮಾಲೀಕರು ನಡೆಸಿದ ಸಭೆ ವಿಫಲಗೊಂಡ ಬಳಿಕ ಬಂದ್ಗೆ ಕರೆ ನೀಡಲಾಗಿದೆ.
ಸಭೆಯ ಬಳಿಕ ಮಾತನಾಡಿದ ಷಣ್ಮುಗಪ್ಪ, ತರಕಾರಿ, ಔಷಧದ ಗಾಡಿ, ಕೋಳಿ ಸಾಗಾಣಿಕೆ, ದಿನಬಳಕೆ ವಸ್ತುಗಳ ಸಾಗಾಟ, ಆನ್ಲೈನ್ ವಸ್ತುಗಳ ಸಾಗಾಟದ ವಾಹನಗಳು ಸಂಪೂರ್ಣ ಬಂದಾಗಲಿವೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಲಾರಿಗಳು ಸೇರಿದಂತೆ ಭಾರೀ ವಾಹನಗಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.