Select Your Language

Notifications

webdunia
webdunia
webdunia
Sunday, 13 April 2025
webdunia

ಮಾಧ್ಯಮಗಳ ವಿರುದ್ಧ ಸಚಿವರ ಬೆಂಬಲಿಗರ ಪ್ರತಿಭಟನೆ

ಸಚಿವರ ಬೆಂಬಲಿಗರು
ಚಾಮರಾಜನಗರ , ಸೋಮವಾರ, 7 ಜನವರಿ 2019 (18:00 IST)
ಮಾಧ್ಯಮಗಳ ವಿರುದ್ಧ ಹಾಗೂ ಹಿಂದುಳಿದ ವರ್ಗಗಳ ಸಚಿವ ಸಿ.ಪುಟ್ಟರಂಗಶೆಟ್ಟಿ ಪರವಾಗಿ ಬೃಹತ್ ಪ್ರತಿಭಟನೆ ನಡೆಯಿತು.

ಚಾಮರಾಜನಗರ ನಗರದ ಪಚ್ಚಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಚಿವರ ಬೆಂಬಲಿಗರು, ಕೆಲವು ಖಾಸಗಿ ವಾಹಿನಿಗಳ ನಿರೂಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ನಗರಸಭಾ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಸಚಿವ ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಕ್ಕೆ ಸೇರಿದವರಾದ್ದರಿಂದ ಅವರನ್ನು ಮಾಧ್ಯಮಗಳು ಟಾರ್ಗೆಟ್ ಮಾಡಿವೆ. ವಿಧಾನಸೌಧದಲ್ಲಿ ಸಿಕ್ಕಿದ ಹಣದಲ್ಲಿ ಸಚಿವರ ಪಾತ್ರವಿಲ್ಲದಿದ್ರೂ ಸಹ ಮಾಧ್ಯಮಗಳು ಸಚಿವರನ್ನು ಏಕವಚನದಲ್ಲಿ ಮಾತಾಡಿಸಿ, ಅವರನ್ನು ತೇಜೋವಧೆ ಮಾಡುವ ಕೆಲಸ ಮಾಡುತ್ತಿರುವುದು ಖಂಡನೀಯ. ಬೇರೆ ಸಚಿವರು ಭ್ರಷ್ಟಾಚಾರ ಮಾಡಿದಾಗ ಇದೇ ಮಾತುಗಳು ಅವರ ವಿರುದ್ಧ ಕೆಟ್ಟ ಶಬ್ಧ ಬಳಸಿಲ್ಲ. ಆದ್ರೆ ಸರಳತೆಗೆ ಹೆಸರಾದ ಪುಟ್ಟರಂಗಶೆಟ್ಟಿ ಅವರ ವಿರುದ್ಧ ಮಾಧ್ಯಮಗಳು ಬಳಸುತ್ತಿರುವ ಭಾಷೆ ಸರಿಯಾದುದಲ್ಲ.

ಈ ರೀತಿ ಸಚಿವರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು.



 

Share this Story:

Follow Webdunia kannada

ಮುಂದಿನ ಸುದ್ದಿ

ಧಗಧಗನೆ ಹೊತ್ತಿ ಉರಿದ ಬಣವೆ: ಅಪಾರ ನಷ್ಟ