Publish Date: Sat, 01 Jul 2017 (16:54 IST)
Updated Date: Sat, 01 Jul 2017 (16:56 IST)
ರಾಜ್ಯದಲ್ಲಿನ ಸರಕಾರಿ ಆಸ್ಪತ್ರೆಯ ಸ್ಥಿತಿಯ ಬಗ್ಗೆ ನಿನಗೇನು ಗೊತ್ತು? ದಿನದ 24 ಗಂಟೆಗಳ ಕಾಲ ಸೇವೆ ಲಭ್ಯವಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಶಾಸಕ ವರ್ತೂರ್ ಪ್ರಕಾಶ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಲಾರ ಪತ್ರಿಕೆ ದಿನಾಚರಣೆ ವೇಳೆ ಶಾಸಕ ವರ್ತೂರ್ ಪ್ರಕಾಶ್ ಭಾಷಣ ಮಾಡಿ, ಡೆಂಘಿ ಜ್ವರ ಬಂದರೆ ರೋಗಿಗಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಬೇಡಿ, ಇಲ್ಲದಿದ್ರೆ ಮೂರು ದಿನದಲ್ಲಿ ಡೆಡ್‌ಬಾಡಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಕೂಡಲೇ ರೋಗಿಗಳನ್ನು ನೇರವಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಶಾಸಕ ಪ್ರಕಾಶ್ ಸಲಹೆ ನೀಡಿದ್ದಾರೆ.
ಶಾಸಕ ಪ್ರಕಾಶ್ ಭಾಷಣದಿಂದ ಗರಂ ಆದ ಆರೋಗ್ಯ ಸಚಿವ ರಮೇಶ್ ಕುಮಾರ್ ತಮ್ಮ ಭಾಷಣದಲ್ಲಿ ಪ್ರಕಾಶ್‌ರನ್ನು ತರಾಟೆಗೆ ತೆಗೆದುಕೊಂಡು, ಬಾಯಿಗೆ ಬಂದಂತೆ ಮಾತನಾಡಬೇಡ. ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಆಸ್ಪತ್ರೆಗಳನ್ನು ಸುಧಾರಣೆ ಮಾಡಲಾಗಿದೆ ಎಂದರು.
ವರ್ತೂರ್ ಪ್ರಕಾಶ್ ನಿನಗೇನು ಗೊತ್ತು ಸರಕಾರಿ ಆಸ್ಪತ್ರೆಯ ಸ್ಥಿತಿ? ನಿನ್ನ ಹತ್ತಿರ ದುಡ್ಡು ಇದ್ದರೆ ಎಲ್ಲಿಗೆ ಬೇಕಾದ್ರೂ ಹೋಗಿ ಚಿಕಿತ್ಸೆ ಪಡೆಯಿರಿ. ನಿಮಗೆ ಕಡುಬಡವರ ಕಷ್ಟ ಗೊತ್ತಿಲ್ಲ ಎಂದು ಸಚಿವ ರಮೇಶ್ ಕುಮಾರ್ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.