Publish Date: Sat, 01 Jul 2017 (16:26 IST)
Updated Date: Sat, 01 Jul 2017 (16:28 IST)
ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮದ್ಯದ ಹೊಳೆ ಹರಿದಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಸಿಎಂ ಉಪಸ್ಥಿತಿಯಲ್ಲಿಯೇ ಮದ್ಯದ ಹೊಳೆ ಹರಿದಿರುವುದು ಆಘಾತ ತಂದಿದೆ.
ಸಾವಿರಾರು ಕಾರ್ಯಕರ್ತರಿಗೆ ಹಣ ಮದ್ಯ ಹಂಚಿದ ಕಾಂಗ್ರೆಸ್, ಒಬ್ಬರಿಗೆ 1 ಮದ್ಯದ ಬಾಟಲ್ ಮತ್ತು 500 ರೂಗಳನ್ನು ಆಯೋಜಕರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮದ ವೇದಿಕೆಯ ಹಿಂದೆಯೇ ಕಾರ್ಯಕರ್ತರು ಮದ್ಯ ಸೇವಿಸಿ, ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಬಾಕಿದ ಘಟನೆ ನಡೆದಿದೆ ಎನ್ನಲಾಗಿದೆ. ಚುನಾವಣಾ ಪೂರ್ವ ತಯಾರಿಯಾದ ಕಾಂಗ್ರೆಸ್ ಸಮಾವೇಶದಂತಿತ್ತು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.