Select Your Language

Notifications

webdunia
webdunia
webdunia
webdunia

ಕಾಶಿ ಯಾತ್ರೆ ರೈಲು ಪ್ರವಾಸಕ್ಕೆ ಸಚಿವ ರಾಮಲಿಂಗರೆಡ್ಡಿ ಚಾಲನೆ

Minister Ramalingareddy drives for Kashi Yatra train tour
ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟ ಭಾರತ್‌ ಗೌರವ್‌ ೪ನೇ ಕಾಶಿಯಾತ್ರೆ ಟ್ರೈನ್ ಗೆ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗರೆಡ್ಡಿ ಇಂದು ಚಾಲನೆ ನೀಡಿದ್ರು. ಇದು ರಾಜ್ಯ ಸರ್ಕಾರದ ಕಾಶಿಯಾತ್ರೆಯಾಗಿದ್ದು, ಈ ಹಿಂದೆ ಮೂರು ಟ್ರಿಪ್ ಆಗಿದ್ದು, ಇದು ನಾಲ್ಕನೇ ಟ್ರಿಪ್ ಆಗಿದೆ.ಇನ್ನು ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ಒಟ್ಟು 403 ಪ್ರಯಾಣಿಕರನ್ನ ರೈಲು ಹೊತ್ತು ಸಾಗಿತು. 20 ಸಾವಿರ ರೂಪಾಯಿಗಳ ಪ್ಯಾಕೇಜ್‌ ಪ್ರವಾಸ ಯೋಜನೆ ಇದಾಗಿದ್ದು, 5 ಸಾವಿರ ರೂಪಾಯಿಗಳನ್ನು ರಾಜ್ಯ ಸರಕಾರ ಭರಿಸಲಿದೆ. 15,000 ರೂಪಾಯಿಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿದೆ. ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಾಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಸೌಲಭ್ಯಗಳನ್ನು ನೀಡಲಾಗಿದೆ. ಇದು 8 ದಿನಗಳ ಪ್ರವಾಸವಾಗಿದ್ದು, ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಈ ರೈಲಿನಲ್ಲಿದ್ರು. ಇನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿಯೇ ಪ್ರತ್ಯೇಕ ಬೋಗಿಗಳನ್ನ ತಯಾರಿಸಲಾಗಿದ್ದು, ಆಗಸ್ಟ್  ೧೫ ಕ್ಕೆ ೫ ನೇ ಯಾತ್ರೆ ಶುರುವಾಗಲಿದೆ ಅಂತ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿ ಔಟ್