Webdunia - Bharat's app for daily news and videos

Install App

ಬಿಜೆಪಿಯವರು ಹಿಂದೂ ಸಂಘಟನೆಗಳ ಮೇಲಿನ ಕೇಸ್ ವಾಪಸ್ ಪಡೆದಿಲ್ವಾ: ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

Krishnaveni K
ಮಂಗಳವಾರ, 15 ಅಕ್ಟೋಬರ್ 2024 (15:16 IST)
ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗೆ ಇಂದು ಸಚಿವ ರಾಮಲಿಂಗಾರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದರು.

ಇತ್ತೀಚೆಗೆ ನಡೆದ ಸಚಿವ ಸಂಪುಟಸಭೆಯಲ್ಲಿ 43 ಕೇಸ್ ಗಳನ್ನು ಹಿಂಪಡೆಯಲಾಗಿದೆ. ಶಾಶ್ವತ ನೀರಾವರಿಗಾಗಿ ಹೋರಾಟ ಮಾಡಿದವರ ಮೇಲಿನ ಪ್ರಕರಣಗಳನ್ನು ಡಾ.ಎಂ.ಸಿ.ಸುಧಾಕರ್ ಅವರ ಮನವಿ ಮೇರೆಗೆ ಹಿಂಪಡೆಯಲಾಗಿದೆ. ಸಂವಿಧಾನಕ್ಕೆ ಅಪಮಾನ ಮಾಡಿದವರ ವಿರುದ್ಧ ಹೋರಾಟ ಮಾಡಿದ ಎನ್.ಭಾಸ್ಕರ್, ಕರವೇಯ ನಾರಾಯಣ ಗೌಡ, ಗಣರಾಜ್ಯ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಇರುವ ಕಾರಣಕ್ಕೆ ನಡೆದ ಪ್ರತಿಭಟನೆ, ಪೇಸಿಎಂ ಅಭಿಯಾನದಲ್ಲಿ ಪೋಸ್ಟರ್ ಅಂಟಿಸಿದವರ ವಿರುದ್ದ ಹೀಗೆ ಒಂದಷ್ಟು ಜನಪರ ಹೋರಾಟಗಳನ್ನು ನಡೆಸುವಾಗ ದಾಖಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ.

‘ಇವುಗಳ ಪೈಕಿ ಹಳೇ ಹುಬ್ಬಳ್ಳಿ ಪ್ರಕರಣವೂ ಒಂದು ಇದನ್ನೂ ಸಹ ನಾವು ವಾಪಸ್ ಪಡೆದಿದ್ದೇವೆ. ಬಿಜೆಪಿಯವರು ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ಯಾವ, ಯಾವ ಪ್ರಕರಣಗಳನ್ನು ಹಿಂಪಡೆದಿದ್ದರು ಎನ್ನುವ ದೊಡ್ಡ ಪಟ್ಟಿಯೇ ಇದೆ’ ಎಂದು ಸಚಿವರು ಆರೋಪಿಸಿದ್ದಾರೆ.

182 ಕೋಮು ದ್ವೇಷದ ಪ್ರಕರಣಗಳು ಬಿಜೆಪಿಯಿಂದ ವಾಪಸ್

ಬಿಜೆಪಿಯವರು 385 ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದರು. ಇದರಲ್ಲಿ 182 ಪ್ರಕರಣಗಳು ಕೋಮು ದ್ವೇಷ ಸೇರಿದಂತೆ ಅನೈತಿಕ ಪೊಲೀಸ್ ಗಿರಿ, ಪಬ್ ದಾಳಿ ಸೇರಿದಂತೆ ಈ ರೀತಿಯ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಇದರಿಂದ  ಸುಮಾರು 2 ಸಾವಿರಕ್ಕೂ ಹೆಚ್ಚು ಆರೋಪಿಗಳ ಮೇಲಿನ ಪ್ರಕರಣಗಳು ಇಲ್ಲವಾಗಿದೆ. 2022 ರಲ್ಲಿ 62 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ. ಸಿ.ಟಿ.ರವಿ, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಹಾಲಪ್ಪ ಆಚಾರ್, ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಜೆ.ಸಿ.ಮಾಧುಸ್ವಾಮಿ ಅವರು ಇದರ ಫಲಾನುಭವಿಗಳು.

ಪಿಎಫ್ ಐ ಮೇಲಿನ ಕೇಸ್ ವಾಪಸ್ ಪಡೆದಿದ್ದು ಬಿಜೆಪಿ

ಶ್ರೀರಾಮ ಸೇನೆ, ಭಜರಂಗದಳ, ಹಿಂದೂ ಜಾಗರ ವೇದಿಕೆ ಸದಸ್ಯರೇ ಇದರ ಲಾಭ ಪಡೆದಿದ್ದಾರೆ. 2018- 20 ರ ಸಾಲಿನಲ್ಲಿ 127 ಕೇಸ್ ಗಳನ್ನು ಬಿಜೆಪಿ ಹಿಂದಕ್ಕೆ ಪಡೆದಿದೆ. ಇದರ ಫಲಾನುಭವಿಗಳು ಪಿಎಫ್ ಐ, ಎಸ್ ಡಿಪಿಐ ಅವರ ಮೇಲಿದ್ದ ಕೇಸ್ ಗಳನ್ನೂ ಹಿಂದಕ್ಕೆ ಪಡೆಯಲಾಗಿದೆ.

ನಾನು ಗೃಹ ಸಚಿವ ಆಗಿದ್ದಾಗ ನಡೆದ ಪರೇಸ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಏನೇನೋ ಮಾಡಿದರು. ನಂತರ ಎನ್ ಐಎ ತನಿಖಾ ತಂಡ ಆತನ ಸಾವನ್ನು ಆಕಸ್ಮಿಕ ಎಂದು ಹೇಳಿತು.

ಹೆಣದ ಮೇಲಿನ ರಾಜಕೀಯ ಪುಸ್ತಕ ಮರುಮುದ್ರಣ

ಬಿಜೆಪಿಯವರು ಹೆಣ ಬಿದ್ದರೆ ಸಾಕು ರಣಹದ್ದುಗಳಂತೆ ಕಾಯುತ್ತಿರುತ್ತಾರೆ. ಬಿಜೆಪಿಯವರ ಹೆಣದ ಮೇಲಿನ ರಾಜಕೀಯದ ಬಗ್ಗೆ ಪುಸ್ತಕವಿದ್ದು ಅದನ್ನು ಮತ್ತೊಮ್ಮೆ ಮುದ್ರಿಸಲಾಗುವುದು.

ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಕಲಂ 321 ರ ಅಡಿ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದರೂ ವಾಪಸ್ ಪಡೆಯುವ ಅಧಿಕಾರ ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗಿದೆ. ಗೃಹ ಇಲಾಖೆಗೆ ಕೇಸಿಗೆ ಸಂಬಂಧ ಪಟ್ಟವರು ವಾಪಸ್ ಪಡೆಯಬೇಕು ಎಂದು ಮನವಿ ಸಲ್ಲಿಸಿರುತ್ತಾರೆ. ಇದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅನೇಕ ಬಾರಿ ದುರುದ್ದೇಶಪೂರಿತವಾಗಿ ಕೇಸ್ ದಾಖಲಿಸಲಾಗಿರುತ್ತದೆ. ರೈತರ ಪರ, ಭಾಷೆ, ಜಲವಿವಾದ ಸೇರಿದಂತೆ ಅನೇಕ ಸಂಘಟನೆಗಳು ಹೋರಾಟ ನಡೆಸಿರುತ್ತವೆ.  ಬಿಜೆಪಿಯಲ್ಲಿ ಸುಳ್ಳು ಹೇಳುವವರನ್ನೇ ವಕ್ತಾರನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿಯವರ ಸುಳ್ಳುಗಳನ್ನೇ ಜನರು ನಂಬಬಾರದು ಎಂದು ಸತ್ಯವನ್ನು ತಿಳಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments