Select Your Language

Notifications

webdunia
webdunia
webdunia
webdunia

ಹೊಸ ಮಾರ್ಗಸೂಚಿಯೊಂದಿಗೆ ವಿದ್ಯಾಗಮ ಆರಂಭ-ಶಿಕ್ಷಣ ಸಚಿವ

ಹೊಸ ಮಾರ್ಗಸೂಚಿಯೊಂದಿಗೆ  ವಿದ್ಯಾಗಮ ಆರಂಭ-ಶಿಕ್ಷಣ ಸಚಿವ
ಬೆಂಗಳೂರು , ಬುಧವಾರ, 16 ಡಿಸೆಂಬರ್ 2020 (12:04 IST)
ಬೆಂಗಳೂರು : ಹೊಸ ಮಾರ್ಗಸೂಚಿಯೊಂದಿಗೆ  ವಿದ್ಯಾಗಮ ಆರಂಭ ಮಾಡಲಾಗುವುದು ಎಂದು ಶಿಕ್ಷಣ್ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳ್ಳವರು ಮಾತ್ರ ಆನ್ ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ವಿದ್ಯಾಗಮ ಆರಂಭ ಮಾಡಲಾಗಿತ್ತು. ಶಿಕ್ಷಕರಿಗೆ ಕೊರೊನಾ ಬಂದ ಹಿನ್ನಲೆಯಲ್ಲಿ ವಿದ್ಯಾಗಮ ನಿಲ್ಲಿಸಲಾಯಿತು. ದೇವಾಲಯಗಳ ಆವರಣದಲ್ಲಿ ಪಾಠ ಮಾಡಲಾಗುತ್ತಿತ್ತು. ಕೆಲ ಹೆಣ್ಣುಮಕ್ಕಳು ಕಳಿಸಲ್ಲವೆಂದು ಪೋಷಕರು ಹೇಳ್ತಿದ್ರು. ಕೆಲ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೇಗುಲಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಹೊಸ ಮಾರ್ಗಸೂಚಿಯೊಂದಿಗೆ  ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೇ ವಿದ್ಯಾಗಮ ಏಕೆ ಆರಂಭಿಸಬಾರದೆಂದು ಹೈಕೋರ್ಟ್ ಕೇಳಿತು. ತಜ್ಞರು ನೀಡಿದ ಸಲಹೆಗಳನ್ನು ಕೋರ್ಟ್ ಗೆ ಸಲ್ಲಿಸಿದ್ದೇವೆ. ಅದರಂತೆ ಈಗ ವಿದ್ಯಾಗಮ ಪ್ರಾರಂಭ ಮಾಡುತ್ತೇವೆ. ಶಾಲೆಯ ಹೊರಗೆ ಶಿಕ್ಷಣ ನೀಡುತ್ತೇವೆ. ಮಕ್ಕಳಿಗೆ ಹತ್ತಿರುವಿರುವ ಶಾಲೆಗಳಿಗೆ ಹೋಗಬಹುದಾಗಿದೆ. ಪೋಷಕರ, ಶಿಕ್ಷಕರ ಅಪೇಕ್ಷೆ ಮೇರೆಗೆ ವಿದ್ಯಾಗಮ ಆರಂಭ ಮಾಡಲಾಗಿದೆ, ಇದಕ್ಕೆ ಯಾವುದೇ ವಿರೋಧವಿಲ್ಲ ಎಂದು ಅವರು ತಿಳಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕ್ ಯುದ್ಧಕ್ಕೆ 50 ವರ್ಷ; ಪ್ರಧಾನಿ ಮೋದಿ, ಬಿಎಸ್ ವೈ ಯಿಂದ ಯೋಧರಿಗೆ ನಮನ