Select Your Language

Notifications

webdunia
webdunia
webdunia
webdunia

ಆಗೋಯ್ತು, ಇಷ್ಟೇ ದಿನ ಗೃಹಲಕ್ಷ್ಮಿ ಬಂದೇ ಬಿಡುತ್ತೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Laxmi Hebbalkar

Krishnaveni K

ಬೆಂಗಳೂರು , ಸೋಮವಾರ, 3 ಮಾರ್ಚ್ 2025 (16:08 IST)
Photo Credit: X
ಬೆಂಗಳೂರು: ರಾಜ್ಯದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಬಂದಿಲ್ಲ ಎನ್ನುವ ಆಕ್ರೋಶದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಷ್ಟೇ ದಿನ ಕೊಡಿ ಎಲ್ಲಾ ಕಂತು ಪಾವತಿಯಾಗುತ್ತದೆ ಎಂದಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಬಂದಿಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ 2,000 ರೂ. ಸಂದಾಯವಾಗಬೇಕು. ಆದರೆ ಇದುವರೆಗೆ ಸಮರ್ಪಕವಾಗಿ ಹಣ ಬಂದಿಲ್ಲ.

ಹೀಗಾಗಿ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದೇ ವಾರ ಎಲ್ಲರ ಖಾತೆಗೆ ಹಣ ಬಂದು ಬಿಡುತ್ತದೆ ಎಂದಿದ್ದರು. ಆದರೆ ಇನ್ನೂ ಎಲ್ಲರ ಖಾತೆಗೆ ಬಂದಿಲ್ಲ.

ಈ ಬಗ್ಗೆ ಮಾಧ್ಯಮಗಳು ಮತ್ತೆ ಸಚಿವೆಯನ್ನು ಪ್ರಶ್ನೆ ಮಾಡಿವೆ. ಈ ಬಗ್ಗೆ ಉತ್ತರಿಸಿರುವ ಅವರು ಇದೇ ವಾರದೊಳಗೆ ಎಲ್ಲರ ಖಾತೆಗೆ ಹಣ ಜಮೆ ಆಗಲಿದೆ. ಡಿಸೆಂಬರ್ ತಿಂಗಳ ಕಂತಿನ ಹಣ ಇನ್ನೆರಡು ದಿನಗಳಲ್ಲಿ ಖಾತೆಗೆ ಬರಲಿದೆ. ಯಾವುದೇ ಕಾರಣಕ್ಕೂ ಮಿಸ್ ಮಾಡಲ್ಲ. ಇನ್ಮುಂದೆ ಪ್ರತೀ ತಿಂಗಳು ಹಣ ಹಾಕಲಿದ್ದೇವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Rohit Sharma:ನಮ್ಮ ಕ್ಯಾಪ್ಟನ್ ಹಿಟ್ ಮ್ಯಾನ್ ಕಂಪ್ಲೀಟ್ ಫಿಟ್ ಮ್ಯಾನ್: ಕಾಂಗ್ರೆಸ್ ನಾಯಕಿ ಮೇಲೆ ಗುರ್ ಎಂದ ಬಿಸಿಸಿಐ