ಬೆಂಗಳೂರು: ನಮ್ಮೆಲ್ಲರ ಗುರಿ ಮತೀಯ ಶಕ್ತಿಗಳನ್ನು ವಿರುದ್ಧ ಹೋರಾಟ ಮಾಡಿ, 2028ಕ್ಕೆ ಮತ್ತೇ ನಮ್ಮ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಉದ್ದೇಶ ಮತ್ತು ಗುರಿಯಾಗಿರಬೇಕೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಯುವಕರು ಪಕ್ಷವನ್ನು ಗಟ್ಟಿಗೊಳಿಸಿದರೆ ಮಾತ್ರ ನಮಗೆ ಅಧಿಕಾರ ಹಾಗೂ ಸಮಾಜದಲ್ಲಿ ಶಾಂತಿ ನೆಲೆಯಾಗುತ್ತದೆ. ಬಿಜೆಪಿ, ಎಬಿವಿಪಿ, ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಂಡು ನಾವು ಗಲ್ಲಿಯಲ್ಲಿ, ನಗರದಲ್ಲಿ, ಊರಿನಲ್ಲಿ ಎಲ್ಲರ ಮೇಲೆ ಕಣ್ಣಿಟ್ಟು ಚಾಣಕ್ಷತನದಿಂದ ಅವರಿಗೆ ಉತ್ತರವನ್ನು ಕೊಡಬೇಕು ಎಂದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ನಮ್ಮ ಯುವಕರ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತುತ್ತಿದೆ. ಆದರೆ ಯುವಪೀಳಿಗೆ ಗಾಂಧೀಜಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿಗಳ ದಾರಿಯಲ್ಲಿ ಸಾಗಿದರೆ ಅಷ್ಟೇ ಉತ್ತಮ ಸಮಾಜವನ್ನು ಕಟ್ಟಬಹುದು ಎಂದರು.
ಕೇಂದ್ರ ಸರ್ಕಾರ ಒಂದು ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುತ್ತೇವೆಂದು ಇದೀಗ ಬೋಂಡಾ, ಬಜ್ಜಿಯನ್ನು ಮಾರಿ ಎನ್ನುವ ಹಾಗೇ ನಡೆಸಿಕೊಳ್ಳುತ್ತಿದೆ. ಆದರೆ ರಾಜ್ಯದಲ್ಲಿರುವ ಸಿದ್ದರಾಮಯ್ಯನವರ ಸರ್ಕಾರ ಯುವಕರಿಗೆ, ಪದವಿದರರಿಗೆ ನಿರಾಸೆ ಮಾಡಬಾರದೆಂದು ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ.