Select Your Language

Notifications

webdunia
webdunia
webdunia
webdunia

ನನ್ನನ್ನು ಮುಟ್ಟಾ ಬೇಕಾದರೆ 100ಸಿದ್ದರಾಮಯ್ಯ ಬರ್ಬೇಕು: ಕುಮಾರಸ್ವಾಮಿ ಕೌಂಟರ್

HD Kumaraswamy
Photo Courtesy X
ಬೆಂಗಳೂರು: ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕೆಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಗಣಿ ಗುತ್ತಿಗೆ ಹಗರಣ ಆರೋಪದಲ್ಲಿ ಅಗತ್ಯ ಬಿದ್ದರೆ ಮುಲಾಜಿಲ್ಲದೆ ಎಚ್ ಡಿ ಕುಮಾರಸ್ವಾಮಿಯನ್ನು ಬಂಧಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಇಂದು ಹೇಳಿದರು.

ಈ ಹೇಳಿಕೆ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು ನನಗೆ ಭಯ ಶುರುವಾಗಿದೆಯಾ, ನನ್ನನ್ನು ನೋಡಿದ್ರೆ ಹಾಗೆ ಅನುಸುತ್ತಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಕಳೆದ ವಾರದಿಂದ ಹೇಗೆ ನಡೆದುಕೊಂಡಿದ್ದಾರೆಂದು ನೋಡಿದ್ದೀರಲ್ಲ. ಜನ ನೋಡಿದ್ದಾರೆ. ದಾಖಲೆ ಇದ್ರುನೂ ಈ ರೀತಿ ಬಂಡತನ ಪ್ರದರ್ಶಿಸಿದ ಸಿಎಂ ನೋಡಿಲ್ಲ.

ಕುಮಾರಸ್ವಾಮಿಯವರನ್ನು ಬಂಧಿಸಬೇಕೆಂದರೆ ನೂರು ಸಿದ್ದರಾಮಯ್ಯ ಬರಬೇಕೆಂದು ಕೌಂಟರ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಹೀಗಿದೆ: ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂಧನ ಮಾಡ್ತೀನಿ.

ಈಗಾಗಲೇ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದೆಂಬ ಭಯ ಅವರನ್ನು ಕಾಡುತ್ತಿದೆ ಎಂದಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಗೊಂಬೆ ಆಡ್ಸೋನು ಮೇಲೆ ಕುಂತವ್ನು ಎಂದು ಮೋದಿಗೆ ವ್ಯಂಗ್ಯ ಮಾಡಿದ ಸಿದ್ದರಾಮಯ್ಯ