Select Your Language

Notifications

webdunia
webdunia
webdunia
webdunia

ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕೋಟ್ಯಾಂತರ ಭೂ ಕಬಳಿಕೆ ಆರೋಪ

ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕೋಟ್ಯಾಂತರ ಭೂ ಕಬಳಿಕೆ ಆರೋಪ
ಬೆಂಗಳೂರು , ಶುಕ್ರವಾರ, 1 ಡಿಸೆಂಬರ್ 2017 (19:47 IST)
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಒಂದು ಏಕರೆ ಜಮೀನು ಕಬಳಿಸಿದ್ದಾರೆ ಎನ್ನುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್‌ನಂತಹ ಪ್ರಭಾವಿ ನಾಯಕರು ಕೇವಲ ಒಂದು ಏಕರೆ ಭೂಮಿ ಕಬಳಿಸಿದ್ದಾರೆ ಎನ್ನುವ ಆರೋಪದಲ್ಲಿ ಹುರುಳಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
 
ಸಚಿವ ಡಿಕೆಶಿ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ವಿರುದ್ಧ ಬಸಪ್ಪ, ಕೃಷ್ಣಪ್ಪ ಎನ್ನುವವರು ದೂರು ಸಲ್ಲಿಸಿದ್ದು, ನನಗೆ ನ್ಯಾಯಬೇಕು ಮರ್ಯಾದೆಯಿಂದ ಬದುಕಬಲ್ಲಷ್ಟು ನನ್ನಲ್ಲಿ ಹಣವಿದೆ. ಆದರೆ, ಅನ್ಯಾಯಕ್ಕೆ ಅವಕಾಶ ಕೊಡುವುದಿಲ್ಲ.ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಗುಡುಗಿದ್ದಾರೆ. 
 
ಭೂಕಬಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್, ನಾನು ಭೂಕಬಳಿಕೆ ಮಾಡಿಲ್ಲ. ಆ ಜಮೀನು ಅವರ ಜಮೀನೇ ಅಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ನೀಡುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಆರ್.ಪುರಂ ಆಸ್ಪತ್ರೆಯಲ್ಲಿ ಕೀಚಕ: ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಕಾಮುಕ ಅರೆಸ್ಟ್