Publish Date: Mon, 13 Jul 2026 (09:17 IST)
Updated Date: Mon, 13 Jul 2026 (09:19 IST)
ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿ ಜನಸಾಮಾನ್ಯರ ಕಷ್ಟ ಅರಿಯಲು ಮುಂದಾಗಿದ್ದ ಸಾರಿಗೆ ಸಚಿವ ಬೈರತಿ ಸುರೇಶ್ ಹೀರೋ ಆಗಿದ್ದರು. ಆದರೆ ಅವರು ಮಾಡಿದ ಒಂದು ಕೆಲಸಕ್ಕೆ ಈಗ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ತಿದ್ದಾರೆ.
ಶನಿವಾರ ರಾತ್ರಿ ಸಚಿವ ಬೈರತಿ ಸುರೇಶ್ ದಿಡೀರ್ ಬಿಎಂಟಿಸಿ ಬಸ್ ನಲ್ಲಿ ಮಾಸ್ಕ್ ಧರಿಸಿ ಯಾರಿಗೂ ಗುರುತು ಸಿಗದಂತೆ ಸಾಮಾನ್ಯ ಜನರಂತೆ ಪ್ರಯಾಣ ಮಾಡಿ ಎಲ್ಲರಿಗೂ ಸರ್ಪೈಸ್ ಕೊಟ್ಟಿದ್ದರು. ಈ ವೇಳೆ ಜನರ ಸಮಸ್ಯೆಗಳೇನೆಂದು ತಿಳಿಯುವ ಪ್ರಯತ್ನ ಮಾಡಿದ್ದರು.
ಆದರೆ ಬಸ್ ನಲ್ಲಿ ಪ್ರಯಾಣ ಮಾಡುವಾಗ ಸಚಿವರು 100 ರೂ ಕೊಟ್ಟು ಎರಡು ಟಿಕೆಟ್ ಕೊಡುವಂತೆ ಕೇಳಿದಾಗ ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್ ನಿಂದ ಇಳಿಯಲು ಹೇಳಿದ್ದ ಕಂಡಕ್ಟರ್ ವಿಚಾರ ಸುದ್ದಿಯಾಗಿತ್ತು. ಈ ನಿರ್ವಾಹಕನನ್ನು ಶಾಸಕರು ಸ್ಥಳದಲ್ಲೇ ಅಮಾನತು ಮಾಡಿದ್ದು ಈಗ ಜನರಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
6 ರೂ. ಟಿಕೆಟ್ ಗೆ 100 ರೂ ಕೊಟ್ಟರೆ ಆ ಕಂಡಕ್ಟರ್ ಎಲ್ಲಿಂದ ಚಿಲ್ಲರೆ ತರಬೇಕು? ನಿರ್ವಾಹಕರು ಸದಾ ಚಿಲ್ಲರೆ ಇಟ್ಟುಕೊಂಡು ತಿರುಗಾಡಲು ಆಗುತ್ತದೆಯೇ? ಇದೊಂದು ಕಾರಣಕ್ಕೆ ಆತನನ್ನು ಸಸ್ಪೆಂಡ್ ಮಾಡಿದ್ದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಬಿಜೆಪಿ ಶಾಸಕ, ಸುರೇಶ್ ಕುಮಾರ್ ಚಿಲ್ಲರೆ ಇಲ್ಲ ಎಂದಿದ್ದರೆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಬಹುದಿತ್ತಲ್ಲ? ಸಸ್ಪೆಂಡ್ ಮಾಡಿದ್ದು ಪ್ರಚಾರಕ್ಕಾಗಿಯೇ ಎಂದು ಟೀಕೆ ಮಾಡಿದ್ದಾರೆ. ಇನ್ನು ಕೆಲವರು ಸಚಿವರ ಕ್ರಮವನ್ನು ಸಮರ್ಥಿಸಿದ್ದಾರೆ. ಜನ ಸಾಮಾನ್ಯರಿಗೆ ನಿತ್ಯವೂ ಇದೇ ಅನುಭವವಾಗುತ್ತಿದೆ. ಚಿಲ್ಲರೆ ಇಲ್ಲ ಎಂದು ನಿರ್ವಾಹಕರು ದರ್ಪ ತೋರುತ್ತಾರೆ. ಅಂತಹವರಿಗೆ ಇದು ಪಾಠ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ