Publish Date: Sun, 12 Jul 2026 (11:30 IST)
Updated Date: Sun, 12 Jul 2026 (11:35 IST)
ಶನಿವಾರ ರಾತ್ರಿ ಕರ್ನಾಟಕದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮುಖಕ್ಕೆ ಮಾಸ್ಕ್ ಧರಿಸಿ, ತಮ್ಮ ಗುರುತು ಸಿಗದಂತೆ ಸಾಮಾನ್ಯ ಪ್ರಯಾಣಿಕರಂತೆ ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಬಿಎಂಟಿಸಿ ಬಸ್ ಹತ್ತಿ ರಹಸ್ಯ ಪರಿಶೀಲನೆ ನಡೆಸುತ್ತಿದ್ದರು.
ಸಚಿವರು ಕೇವಲ ಅಧಿಕಾರಿಗಳ ವರದಿಗಳನ್ನು ನೆಚ್ಚಿಕೊಳ್ಳದೆ, ರಸ್ತೆಯ ವಾಸ್ತವ ಸ್ಥಿತಿಯನ್ನು ಅರಿಯಲು ಹೀಗೆ ಮಾಸ್ಕ್ ಧರಿಸಿ ಬಸ್ ಹಾಗೂ ಆಟೋಗಳಲ್ಲಿ ಪ್ರಯಾಣಿಸಿದ್ದು ಶ್ಲಾಘನೀಯ. ಸಚಿವರು ಎರಡು ಟಿಕೆಟ್‌ಗಳನ್ನು ಕೇಳಿ 100 ರೂಪಾಯಿಯ ನೋಟು ನೀಡಿದ್ದಾರೆ. ಚಿಲ್ಲರೆ ನೀಡಲು ಸಾಧ್ಯವಾಗದ ನಿರ್ವಾಹಕ, "ನನ್ನ ಬಳಿಯೂ ಚಿಲ್ಲರೆ ಇಲ್ಲ, ನಿನ್ನ ಬಳಿಯೂ ಸರಿ ಹೊಂದುವ ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗಿಳಿ" ಎಂದು ಸಚಿವರಿಗೇ ಹೇಳಿದ್ದಾರೆ.
ತಾವ್ಯಾರೆಂಬುದನ್ನು ತಕ್ಷಣಕ್ಕೆ ವ್ಯಕ್ತಪಡಿಸದ ಸಚಿವ ಬೈರತಿ ಸುರೇಶ್ ಅವರು, ಸೌಮ್ಯವಾಗಿ ಬಸ್‌ನಿಂದ ಕೆಳಗಿಳಿದು ಪ್ರಯಾಣಿಕರ ನಿಜವಾದ ಸಮಸ್ಯೆಯನ್ನು ನೇರವಾಗಿ ಅನುಭವಿಸಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಇಂದಿಗೂ ನಗದು ರಹಿತ ಅಥವಾ ಯುಪಿಐ ಪಾವತಿ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದಿರುವುದು ಇಂತಹ ನಿತ್ಯದ ಕಿರಿಕಿರಿಗೆ ಮುಖ್ಯ ಕಾರಣವಾಗಿದೆ.
ಪ್ರತಿದಿನ ಸಾವಿರಾರು ಸಾಮಾನ್ಯ ನೌಕರರು ಮತ್ತು ವಿದ್ಯಾರ್ಥಿಗಳು ಎದುರಿಸುವ 'ಚಿಲ್ರೆ ಇಲ್ಲ' ಎಂಬ ಸಮಸ್ಯೆಯ ತೀವ್ರತೆ ಈಗ ನೇರವಾಗಿ ಸಚಿವರಿಗೇ ಅನುಭವಕ್ಕೆ ಬಂದಂತಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ