ಕೆ ಆರ್ ಪುರಂ ಕ್ಷೇತ್ರದ ಜನತೆಗೆ ಸಚಿವ ಬೈರತಿಯಿಂದ ಭರ್ಜರಿ ಉಡುಗೊರೆ ಕೊಡಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವ ಹೆಸರಿನಲ್ಲಿ ಮತದಾರರಿಗೆ ರೇಷ್ಮೆ ಸೀರೆ ಹಂಚಲಾಗಿದೆ. ಕೆಆರ್ ಪುರದ ಐಟಿಐ ಮೈದಾನದಲ್ಲಿ ಬೃಹತ್ ವೇದಿಕೆ ಸಚಿವ ಬೈರತಿ ಆಯೋಜಿಸಿದ್ದು,ವಿಧಾನಸಭಾ ಚುನಾವಣೆಗೆ ಈಗಲಿಂದಲೇ ಭೈರತಿ ತಯಾರಿ ನಡೆಸಿದ್ದಾರೆ.ಮತದಾರರನ್ನ ಸೆಲೆಯಲು ರೇಷ್ಮೆಸೀರೆ ತಂತ್ರವನ್ನ ಭೈರತಿ ಬಸವರಾಜ್ ರೂಪಿಸಿದ್ದಾರೆ.ಕ್ಷೇತ್ರದ ೧ ಲಕ್ಷ ಮತದಾರರಿಗೆ ಸಚಿವ ಬಸವರಾಜರಿಂದ ಉಡುಗೊರೆಗಳ ಮಹಾಪೂರವೇ ಹರಿದಿದೆ.
ಮತದಾರರಿಗಾಗಿ ಕಾಂಚಿಪುರಂ ನಿಂದ ರೇಷ್ಮೆ ಸೀರೆಗಳನ್ನ ತರಸಲಾಗಿದ್ದು,ಕಾರ್ಯಕ್ರಮದ ಬಳಿಕ ಸೀರೆಗ್ಗಾಗಿ ನೂಕು ನುಗ್ಗಲು ಉಂಟಾಗಿದೆ. ಮಾಧ್ಯಮದವರನ್ನು ಆಹ್ವಾನಿಸದೆ ಈ ಕಾರ್ಯಕ್ರಮ ನಿಯೋಜಿಸಲಾಗಿತ್ತು.