Select Your Language

Notifications

webdunia
webdunia
webdunia
webdunia

ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಸಚಿವ ಅಶ್ವಥ್ ನಾರಾಯಣ

ಸಿಇಟಿ ಪರೀಕ್ಷೆ  ಫಲಿತಾಂಶ ಪ್ರಕಟಿಸಿದ ಸಚಿವ ಅಶ್ವಥ್ ನಾರಾಯಣ
bangalore , ಸೋಮವಾರ, 20 ಸೆಪ್ಟಂಬರ್ 2021 (19:33 IST)
[15:38, 9/20/2021] Viswa Sir: ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆಗಸ್ಟ್ 28, 29 & 30ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದೆ..ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಉನ್ನತ ಶಿಕ್ಷಣ ಇಲಾಖೆ ಸಚಿವ ಅಶ್ವಥ್ ನಾರಾಯಣ, ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, ಒಟ್ಟು 2,01,834 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ 1,93,447 ಅಭ್ಯರ್ಥಿಗಳು ಹಾಜರಾಗಿದ್ದರು. ಕೋವಿಡ್ ಪಾಸಿಟಿವ್ ಇದ್ದ 12 ಅಭ್ಯರ್ಥಿಗಳು ಕೂಡ ಹಾಜರಾಗಿ ಪರೀಕ್ಷೆ ಬರೆದಿದ್ದರು ಅಂತ ತಿಳಿಸಿದ್ದರು.‌ 
 
ಫಲಿತಾಂಶವು ಇಂದು ಮಧ್ಯಾಹ್ನ 4 ಕ್ಕೆ ಪ್ರಾಧಿಕಾರದ ವೆಬ್ ಸೈಟ್ kea.Kar.nic.in ಹಾಗೂ karresults.nic.in ಫಲಿತಾಂಶ ಪ್ರಕಟವಾಗಲಿದೆ..  ಮೆರಿಟ್ ಪಟ್ಟಿಯನ್ನ ಸಿದ್ದಪಡಿಸಿದ ನಂತರ ಇಂಜಿನಿಯರಿಂಗ್ ಕೋರ್ಸಿಗೆ 1,83,231 ರ್ಯಾಂಕ್ ನೀಡಲಾಗಿದೆ. ಮುಂದುವರೆದು ಕೃಷಿ ಕೋರ್ಸಿಗೆ 1,52,518 ಹಾಗೂ ಪಶುಸಂಗೋಪನೆ 1,55,760, ಯೋಗ ಮತ್ತು ನ್ಯಾಚುರೋಪತಿ 1,55,910 ಮತ್ತು ಬಿ. ಫಾರ್ಮ ಕೋರ್ಸಿಗೆ- ಫಾರ್ಮ- ಡಿ ಕೋರ್ಸಿಗೆ 1,86,638. ಅರ್ಹತೆಯನ್ನ ಪಡೆದಿದ್ದಾರೆ.‌  
 
ರ್ಯಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಖುದ್ದಾಗಿ ಸಲ್ಲಿಸಿ ತಮ್ಮ ರ್ಯಾಂಕ್ ಗಳನ್ನ ಪಡೆಯಬಹುದಾಗಿದೆ. ರಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ ದಾಖಲಾತಿ  ಪರಿಶೀಲನೆಯ ನಂತರ ಅರ್ಹತೆ ಪರಿಗಣಿಸಲಾಗುತ್ತೆ..
 
ದಾಖಲಾತಿ ಪರಿಶೀಲನೆ- ಸೌಲಭ್ಯ ಕೇಂದ್ರ ಸ್ಥಾಪನೆ
ಈ ತಿಂಗಳ 30 ರಿಂದ ದಾಖಲಾತಿ ಪರಿಶೀಲನೆ  ಪ್ರತಿಕ್ರಿಯೆ ನಡೆಯಲಿದ್ದು ಆಪ್ ಲೈನ್ ಮೂಲಕ ಸಲ್ಲಿಸಬೇಕಿದೆ.. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗುತ್ತದೆ. ಅಭ್ಯರ್ಥಿಗಳು ಹತ್ತಿರದ ಸೌಲಭ್ಯ ಕೇಂದ್ರಗಳಿಗೆ ಪರಿಶೀಲನೆಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು.  
UGNEET-2021 ರ ಫಲಿತಾಂಶ ಬಂದ ನಂತರ UGNET- 2021 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತ್ತು ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್ಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತೆ. ಹಾಗೇ NATA-2021 ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕೆ ರ್ಯಾಂಕ್ ನ್ನ ನಂತರ ಪ್ರಕಟಿಸಲಾಗುವುದು.. 
 
ಮೈಸೂರಿನ ಮೇಘನ್ ಹೆಚ್ ಕೆ ಪ್ರಥಮ
ಮೈಸೂರಿನ ಪ್ರಮಾತಿ ವಿವ್ಯೂ ಅಕಾಡೆಮಿಯ ಮೇಘನ್ ಹೆಚ್. ಕೆ ಸಿಇಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.‌ ಇಂಜಿನಿಯರಿಂಗ್, ಆಗ್ರಿಕ್ಚರ್, ಪಶುಸಂಗೋಪನೆ, ಬಿ ಫಾರ್ಮಾ, ಯೋಗ ನ್ಯಾಚುರಲಪತಿಯಲ್ಲೂ ಎಲ್ಲ ವಿಭಾಗದಲ್ಲೂ ಮೊದಲ ರ್ಯಾಂಕ್ ಅನ್ನ ಪಡೆದುಕೊಂಡಿದ್ದಾನೆ..

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ 600 ಬ್ರ್ಯಾಂಡ್, 3000 ಆನ್ಲೈನ್ ಸ್ಟೋರ್ ಮುಚ್ಚಿದ ಅಮೆಜಾನ್