Select Your Language

Notifications

webdunia
webdunia
webdunia
webdunia

ಮಂಡ್ಯ ಉಸ್ತುವಾರಿಯಿಂದ ಸಚಿವ ಅಶೋಕ್ ಔಟ್

ಮಂಡ್ಯ ಉಸ್ತುವಾರಿಯಿಂದ ಸಚಿವ ಅಶೋಕ್ ಔಟ್
ಬೆಂಗಳೂರು , ಶನಿವಾರ, 11 ಫೆಬ್ರವರಿ 2023 (12:47 IST)
ಬೆಂಗಳೂರು : ಮಂಡ್ಯ ಉಸ್ತುವಾರಿಯಿಂದ ಸಚಿವ ಅಶೋಕ್ ಔಟ್ ಆಗಿದ್ದಾರೆ. ಗೋಬ್ಯಾಕ್ ಅಭಿಯಾನ, ಹೊಂದಾಣಿಕೆ ರಾಜಕೀಯ ಆರೋಪ ಕೇಳಿ ಬಂದ ಬೆನ್ನಲ್ಲೇ ಮಂಡ್ಯ ಉಸ್ತುವಾರಿ ಜವಾಬ್ದಾರಿಯಿಂದ ಮುಕ್ತಿಗೊಳಿಸುವಂತೆ ಸಿಎಂ ಬೊಮ್ಮಾಯಿಗೆ ಅಶೋಕ್ ಪತ್ರ ಬರೆದಿದ್ದರು.
 
ಅಶೋಕ್ ಪತ್ರದ ಬೆನ್ನಲ್ಲೇ ಮಂಡ್ಯ ಉಸ್ತುವಾರಿ ಬದಲಾವಣೆಗೆ ಆದೇಶ ಹೊರಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಮಂಡ್ಯದ ನೂತನ ಜಿಲ್ಲಾ ಉಸ್ತುವಾರಿಯಾಗಿ ಮತ್ತೆ ನಾರಾಯಣಗೌಡ ಅಥವಾ ಗೋಪಾಲಯ್ಯ ಪೈಕಿ ಯಾರಿಗೆ ಹೊಣೆ ನೀಡಲಾಗುತ್ತದೆ ಎಂಬ ಕುತೂಹಲ ಈಗ ಎದ್ದಿದೆ.

ಚುನಾವಣೆಯ ಮುನ್ನ ಹಲವು ಕೆಲಸಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಮಂಡ್ಯ ಉಸ್ತುವಾರಿಯಿಂದ ಮುಕ್ತಿಗೊಳಿಸಬೇಕೆಂದು ಕೋರಿ ಅಶೋಕ್ ಸಿಎಂಗೆ ಪತ್ರ ಬರೆದು ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಂಗನವಾಡಿಯಲ್ಲಿ ಬಿಸಿ ಸಾಂಬಾರ್ ಬಿದ್ದು ಬಾಲಕಿ ಗಂಭೀರ