Select Your Language

Notifications

webdunia
webdunia
webdunia
webdunia

ನಕಲಿ ವಿರುದ್ಧ ಸಿಡಿದೆದ್ದ ಸಚಿವ : ಪ್ರಭಾವಿಗಳ ಹೆಡೆಮುರಿ ಕಟ್ಟಲು ಸ್ಕೇಚ್

ನಕಲಿ ವಿರುದ್ಧ ಸಿಡಿದೆದ್ದ ಸಚಿವ : ಪ್ರಭಾವಿಗಳ ಹೆಡೆಮುರಿ ಕಟ್ಟಲು ಸ್ಕೇಚ್
ಹಾವೇರಿ , ಶನಿವಾರ, 25 ಏಪ್ರಿಲ್ 2020 (18:03 IST)
ನಕಲಿ ವಿರುದ್ಧ ತೊಡೆತಟ್ಟಿರುವ ರಾಜ್ಯದ ಸಚಿವರೊಬ್ಬರು ಅದರ ಹಿಂದಿರುವ ಪ್ರಭಾವಿಗಳ ಹೆಡೆಮುರಿಕಟ್ಟಲು ಮುಂದಾಗಿದ್ದಾರೆ.

ಸತ್ತ ಬೀಜಗಳನ್ನು, ನಕಲಿ ಬೀಜಗಳನ್ನು ಮಾರಾಟ ಮಾಡುವುದು ರೈತರ ಬದುಕನ್ನು ಸಾಯಿಸುವಂತಹ ಮಹಾಪರಾಧವಾಗಿದೆ.
ನಕಲಿ, ಕಳಪೆ, ಅಕ್ರಮ ಬೀಜವಾಗಲಿ, ಗೊಬ್ಬರವಾಗಲಿ ಮಾರಾಟ ಮಾಡುವವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಹೀಗಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಹಾವೇರಿ ಜಿಲ್ಲಾ ಕೃಷಿ ಅಧಿಕಾರಿಗಳ ತಂಡ ಸುಮಾರು 6 ಕೋಟಿ ರೂ. ಮೌಲ್ಯದ ಅಕ್ರಮ ಬಿಡಿ ಬೀಜಗಳ ದಾಸ್ತಾನು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ನ್ಯಾಯಾಲಯದ ವಶಕ್ಕೆ ವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇಂತಹ ಕಳಪೆ, ನಕಲಿ ಬೀಜ ಮಾರಾಟ ಮಾಡುವವರು ಬದುಕಿದ್ದಂತಹ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಇಂತಹ ಕೃತ್ಯವನ್ನು ತಾವೆಂದಿಗೂ ಸಹಿಸುವುದಿಲ್ಲ. ಕೃಷಿ ಅಧಿಕಾರಿಗಳು ಮತ್ತು ವಿಚಕ್ಷಣಾ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದಾರೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹಾಫ್ ಸೆಂಚುರಿ