Select Your Language

Notifications

webdunia
webdunia
webdunia
webdunia

ಸಣ್ಣ ಮಳೆಗೆ ಕೊಚ್ಚಿಹೋದ ಕೋಟಿ ಕೋಟಿ ವೆಚ್ಚದ ಕಾಲುವೆ

ಸಣ್ಣ ಮಳೆಗೆ ಕೊಚ್ಚಿಹೋದ ಕೋಟಿ ಕೋಟಿ ವೆಚ್ಚದ ಕಾಲುವೆ
ಚಿತ್ರದುರ್ಗ , ಶನಿವಾರ, 12 ಅಕ್ಟೋಬರ್ 2019 (18:38 IST)
ಸುರಿದ ಅಲ್ವಸ್ವಲ್ಪ ಮಳೆಗೆ ನೂರಾರು ಕೋಟಿ ರೂಪಾಯಿ ವೆಚ್ಚದ ಕಾಲುವೆ ಕೊಚ್ಚಿ ಹೋದ ಘಟನೆ ನಡೆದಿದೆ.

ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಕಳಪೆ ಕಾಮಗಾರಿ ನಡೆದಿರೋ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮಳೆ ನೀರಿಗೆ ಕೊಚ್ಚಿ ಹೋಗಿದೆ ಕಾಲುವೆಯ ಸಿಮೆಂಟ್ ಪದರು.

ಸಾವಿರಾರು ಕೋಟಿ ವೆಚ್ಚದ ಭದ್ರ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿರೋ ಶಂಕೆ ವ್ಯಕ್ತವಾಗಿದೆ.

 ಅಲ್ಪ ಸ್ವಲ್ಪ ಸುರಿದ ಮಳೆಯ ನೀರಿಗೆ ಕಾಲುವೆ ಕೊಚ್ಚಿ ಹೋಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ವೇಳೆ ಭದ್ರಾ ನೀರು ಸಂಪೂರ್ಣವಾಗಿ ಹರಿದರೆ ಇತರ ಕಾಲುವೆಗಳ ಪರಿಸ್ಥಿತಿ ಎನಾಗುತ್ತದೆ? ಎಂಬ ಪ್ರಶ್ನೆ ಕೇಳಿಬರತೊಡಗಿದೆ.

ಕಾಮಗಾರಿಯ ಗುಣಮಟ್ಟ ಪರೀಕ್ಷೆ ನಡೆಸಬೇಕೆಂದು ರೈತ ಮುಖಂಡರು ಆಗ್ರಹ ಮಾಡಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲ್ಲೂಕಿನ ದೊಡ್ಡ ಕಿಟ್ಟದ ಹಳ್ಳಿಯ ಸುರಂಗದ ಬಳಿ ನಡೆದ ಘಟನೆ ಇದಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದ ಸಂಸದರಿಗೇ ಘೇರಾವ್ ಹಾಕಿ ಬೆವರಿಳಿಸಿದ ಬಿಜೆಪಿ ಮುಖಂಡರು