Select Your Language

Notifications

webdunia
webdunia
webdunia
webdunia

ಮಾನಸಿಕ ಅಸ್ವಸ್ಥನಾದ ಯುವಕ ಗುಣಮುಖನಾಗಿ ಮರಳಿ ಕುಟುಂಬ ಸೇರಿದ

ಮಾನಸಿಕ ಅಸ್ವಸ್ಥನಾದ ಯುವಕ ಗುಣಮುಖನಾಗಿ ಮರಳಿ ಕುಟುಂಬ ಸೇರಿದ
ಬೆಂಗಳೂರು , ಭಾನುವಾರ, 11 ಸೆಪ್ಟಂಬರ್ 2022 (16:31 IST)
ಉತ್ತರಪ್ರದೇಶದ ಅಲಹಾಬಾದ್​ನ ಮೊಹಮ್ಮದ್ ಆಯುಬ್ ಎಂಬವರ ಪುತ್ರ ಶಿಬು ಯಾನೆ ಮೊಹಮ್ಮದ್ ತೊಯಿಬ್ ಎಂಬ ಯುವಕ ಮಂಗಳೂರಿನ ವೈಟ್ ಡೌಸ್​ನಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಗುಣಮುಖನಾಗಿದ್ದಾನೆ.
 
ಅಲಹಾಬಾದ್​ನ ಶಿಬು ಶಿವಕಾಶಿಯಲ್ಲಿ ಕ್ಯಾಲೆಂಡರ್ ತಯಾರಿಸುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಸೋದರಿಗೆ ಮದುವೆ ನಿಶ್ಚಯವಾಗಿತ್ತು. ಆಕೆಯ ಮದುವೆಯ ಬಳಿಕ ಈತನಿಗೂ ಮದುವೆ ಮಾಡಲು ಯುವತಿ ನೋಡಲಾಗಿತ್ತು. ಮದುವೆಯ ತಯಾರಿಯ ಹಿನ್ನೆಲೆಯಲ್ಲಿ ಶಿಬು ತಾನು ಕೆಲಸ ಮಾಡುವ ಸಂಸ್ಥೆಯಲ್ಲಿ ರಜೆ ಮತ್ತು ದುಡಿದ ಹಣ ಕೇಳಿದ್ದ. ಆದರೆ ಸಂಸ್ಥೆ ಎರಡನ್ನೂ ನೀಡಲು ನಿರಾಕರಿಸಿತ್ತು.
 
ಇದರಿಂದ ದಿಗಿಲುಗೊಂಡ ಈತ ರೈಲ್ವೆ ಸ್ಟೇಷನ್​ಗೆ ಹೋಗಿ ರೈಲು ಹತ್ತಿದ್ದಾನೆ. ತೀರಾ ಆತಂಕದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಸ್ವಸ್ಥನಾಗಿದ್ದಾನೆ. ಹೀಗೆ ರೈಲು ಹತ್ತಿ ಬಂದವನು ಮಂಗಳೂರು ತಲುಪಿದ್ದಾನೆ. ಮಂಗಳೂರು ನಗರದಲ್ಲಿ ಸುಮಾರು ನಾಲ್ಕು ದಿನಗಳಿಂದ ಮಾನಸಿಕ ಅಸ್ವಸ್ಥನಾಗಿ ಬೀದಿ ಬೀದಿ ಅಳೆಯುತ್ತಿದ್ದ ಈತನನ್ನು 2019 ಮೇ ತಿಂಗಳಲ್ಲಿ ನಿರ್ಗತಿಕರಿಗೆ ನೆರವಾಗುವ ನಗರದ ವೈಟ್ ಡೌಸ್ ಸಂಸ್ಥೆಯ ಕೊರಿನ್ ರಸ್ಕಿನ್ ಅವರು ಗಮನಿಸಿ ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕಾರ್ಯಕ್ರಮ ಖಾಲಿ ಕುರ್ಚಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕರು -ಕಾಂಗ್ರೆಸ್ ವ್ಯಂಗ್ಯ