Publish Date: Wed, 18 Jul 2018 (09:50 IST)
Updated Date: Wed, 18 Jul 2018 (09:51 IST)
ಬೆಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ಎಂಬಿ ಪಾಟೀಲ್ ಜತೆಗೆ ಕುಖ್ಯಾತ ರೌಡಿ ಸೈಕಲ್ ರವಿ ದೂರವಾಣಿ ಮೂಲಕ ಸಂಪರ್ಕ ಸಾಧಿಸಿದ್ದನೇ? ಈ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲವೆಬ್ಬಿಸಿದೆ.
ಎಂಬಿ ಪಾಟೀಲ್ ರದ್ದು ಎನ್ನಲಾದ 7760977777 ದೂರವಾಣಿ ಸಂಖ್ಯೆಗೆ ರೌಡಿ ಸೈಕಲ್ ರವಿ ಬಳಸಿದ್ದ ಎನ್ನಲಾದ 9741199999 ಮೊಬೈಲ್ ಸಂಖ್ಯೆಯಿಂದ ಹಲವಾರು ಬಾರಿ ದೂರವಾಣಿ ಕರೆ ಹೋಗಿರುವುದು ಪೊಲೀಸ್ ತನಿಖೆಯ ವೇಳೆ ಗೊತ್ತಾಗಿದೆ.
ಹೀಗಾಗಿ ಮಾಜಿ ಸಚಿವರಿಗೂ ಕುಖ್ಯಾತ ರೌಡಿಗೂ ಇರುವ ನಂಟಿನ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಇದನ್ನು ಎಂಬಿ ಪಾಟೀಲ್ ನಿರಾಕರಿಸಿದ್ದು, ತನಗೂ ಸೈಕಲ್ ರವಿಗೂ ಯಾವುದೇ ಸಂಬಂಧವಿಲ್ಲ. ಹಾಗಿದ್ದರೂ ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಸೈಕಲ್ ರವಿಯದ್ದು ಎಂದು ಮಾಧ್ಯಮಗಳು ಹೇಳಿರುವ ಮೊಬೈಲ್ ನಂಬರ್ ಮಂಡ್ಯ ಮೂಲದ ಕಾಂಗ್ರೆಸ್ ಕಾರ್ಯಕರ್ತನದ್ದು. ಅದನ್ನು ರವಿಗೆ ಸೇರಿದ್ದು ಎಂದು ಮಾಧ್ಯಮಗಳು ತಿರುಚುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Wed, 18 Jul 2018 (09:50 IST)
Updated Date: Wed, 18 Jul 2018 (09:51 IST)