Publish Date: Sun, 30 Sep 2018 (19:40 IST)
Updated Date: Sun, 30 Sep 2018 (19:42 IST)
ರಾಜಧಾನಿಯ ಸ್ವಚ್ಛತೆಗೆ ನಾನು ಮೊದಲ ಆದ್ಯತೆ ನೀಡುತ್ತೇನೆ. ಹೀಗಂತ ನೂತನ ಮೇಯರ್ ಹೇಳಿದ್ದಾರೆ.
ಸುತ್ತೂರು ಶ್ರೀಗಳ ಆಶರ್ವಾದಪಡೆದ ಬಳಿಕ ಬಿಬಿಎಂಪಿ ಮೇಯರ್ ಗಂಗಾಬಿಕಾ ಹೇಳಿಕೆ ನೀಡಿದ್ದಾರೆ. ಮೇಯರ್ ಆದ ಬಳಿಕ ಮೊದಲ ಬಾರಿ ಶ್ರೀಗಳ ಆಶಿರ್ವಾದ ಪಡೆದಿದ್ದೇನೆ. ಮಳೆಗಾಲದಲ್ಲಿ ಬೆಂಗಳೂರಿನಲ್ಲಾಗುವ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವೆ. ಕಾಲುವೆಗಳಲ್ಲಿ ಹೂಳು ತುಂಬಿಕೊಳ್ಳುವುದರಿಂದ ಸಮಸ್ಯೆಯಾಗ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಗಮನ ಹರಿಸಲಾಗ್ತದೆ ಎಂದರು.
ಬೆಂಗಳೂರಿಗರಿಗೆ ಮೂಲಭೂತ ಸೌಕರ್ಯಗಳನ್ನ ಕೊಟ್ಟರೆ ಸಾಕು. ಅವರು ಹೆಚ್ಚೇನು ನಮ್ಮ ಕಡೆಯಿಂದ ಅಪೇಕ್ಷೆ ಪಡೋದಿಲ್ಲ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಾನು ಒತ್ತು ನೀಡುತ್ತೇನೆ. ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸುತ್ತೇನೆ ಎಂದರು.
ಮೈಸೂರು ಮೇಯರ್ ಆಯ್ಕೆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ಪಕ್ಷದ ವರಿಷ್ಠರು ಆ ಬಗ್ಗೆ ತೀರ್ಮಾನಗಳನ್ನ ಮಾಡುತ್ತಾರೆ ಎಂದು ಮೈಸೂರಿನಲ್ಲಿ ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.